Showing posts with label ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ramesha. Show all posts
Showing posts with label ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ramesha. Show all posts

Wednesday, 4 August 2021

ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ankita ramesha

 ..

ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ.


ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1

ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2

ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3

ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4

ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5

ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6

ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7

ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8

ಪಚ್ಚೆ ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9

ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10

ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11

****