Showing posts with label ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ vittalesha. Show all posts
Showing posts with label ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ vittalesha. Show all posts

Monday, 6 September 2021

ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ ankita vittalesha

 ankita ವಿಠಲೇಶ  

ರಾಗ: ಪಹಾಡಿ ತಾಳ: ಕವ್ವಾಲಿ


ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ  ಪ 


ಸಾಗಿ ಬಂದೆ ಭವನೀಗದೆ ನೊಂದು

ಬೇಗ ಕೈಪಿಡಿ ಗುರುರಾಘವೇಂದ್ರಾರ್ಯ 


ದೇವಸ್ವಭಾವ ದಿವ್ಯಪ್ರಭಾವಾ

ಭಾವಿಕ ಭಕುತರ ತಾರಕ ತೇಜಾ

ಆವ ಪಥವೊ ಪ್ರಭು ತೀವಿದೆ ತಮವು

ಠಾವುಗಾಣಿಸು ಗುರುದೇವವರೇಣ್ಯಾ  1

ಸುಧೆಯಸೌರಭವಾ ಬುಧರಿಗೆ ಬೀರಿದ

ಪದುಮನಾಭನಪ್ರಿಯ ಸದಮಲಕಾಯಾ

ಅಧಮನಾದೆ ನಿನ್ನ ಸದನವ ಮರೆದು

ಒದಗಿಬಾರೋ ಪ್ರಭು ಯದುವರಹೃದಯಾ  2

ದುರುಮತಕರಿಭಕೆ ವರಮಹಕೇಸರಿ

ಧರಮ (?) ಪರಾಕ್ರಮಿ ಪರಮದಯಾಳು

ಅರಮನೆಗಾಣದೆ ಸೆರೆಮನೆ ಸಾರ್ದೆ

ಮೊರೆಯ ಕೇಳೋ ಪ್ರಭು ಗುರುಮಹರಾಜ  3

ಕಾಮಿತವೀಯುವ ಕೋಮಲಹೃದಯಾ

ಶ್ರೀಮಂತ್ರಾಲಯ ಸೋಮ ನಿಸ್ಸೀಮಾ

ನಾಮವ ನೆನೆಯದೆ ತಾಮಸಿಯಾದೆ

ನೀ ಮತಿಗಾಣಿಸೋ ಹೇ ಮಹಾಸ್ವಾಮಿ  4

ಸೂರಿಸುಧೀಂದ್ರರ ವೀರಕುಮಾರಾ

ಚಾರುಪದಾಂಬುಜ ಸಾರಿದೆ ಧೀರಾ

ಸಾರಭಕುತಿಪಥ ತೋರಿಸೋ ಪ್ರಭುವೆ

ಪಾರುಮಾಡೋ ವಿಠಲೇಶ ಸುಧ್ಯೇಯಾ  5

***