Showing posts with label ಗಂಗಾಪಿತ ವೆಂಕಟ ಪರ್ವತನಿಲಯ pranesha vittala. Show all posts
Showing posts with label ಗಂಗಾಪಿತ ವೆಂಕಟ ಪರ್ವತನಿಲಯ pranesha vittala. Show all posts

Monday, 11 November 2019

ಗಂಗಾಪಿತ ವೆಂಕಟ ಪರ್ವತನಿಲಯ ankita pranesha vittala

by ಪ್ರಾಣೇಶದಾಸರು
ಗಂಗಾಪಿತ ವೆಂಕಟ ಪರ್ವತನಿಲಯ ಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪ

ಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2

ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3

ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4

ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5

ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6

ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
*******