ಅಂಜೋರೆ ಹೀಂಗೆ ಅಂಜೋರೆನಮ್ಮ ಕಂಜನಾಭನ ಮುಂದೆ ಕಾದುವ ಭ್ರಮತೆಯರು ಪ.
ಅಷ್ಟೂರೊಳಗೆ ಅತಿ ಶ್ರೇಷ್ಠಳೆ ಭಾವೆ ಅಷ್ಟೂರಿಗೆ ಅಭಯ ಕೊಡದಲೆಅಷ್ಟೂರಿಗೆ ಅಭಯ ಕೊಡದಲೆ ಒಳಗೋಗಿಕೃಷ್ಣನ ಮುಸುಕಲಿ ಅಡಗೋರೆ ಜಾಣಿ1
ಚಲುವರೊಳಗೆ ಅತಿ ಚಲುವಳು ಭಾವೆ ಎಲ್ಲರಿಗೆ ಅಭಯವ ಕೊಡದಲೆ ಎಲ್ಲರಿಗೆ ಅಭಯವ ಕೊಡದಲೆ ರಂಗನವಲ್ಲಿ ಮುಸುಕಲಿ ಅಡಗೋರೆ ಜಾಣೆ2
ಕೃಷ್ಣರಾಯನ ಮತ್ತಷ್ಟು ಮಡದಿಯರುಎಷ್ಟು ಅಂಜುತಲೆ ನಮಗಿನ್ನುಎಷ್ಟು ಅಂಜುತಲೆ ನಮಗಿನ್ನು ಕೈಕಾಲುಮುಟಿಗ್ಯಾಗಿ ಕುಳಿತಾರೆ ಜಾಣಿ 3
ಬಲರಾಮನ ಮಡದಿಯ ಛಲವನೆ ನೋಡಿರೆಲಲನೆಯರು ಕರೆಯೆ ಬರಲಿಲ್ಲಲಲನೆಯರು ಕರೆಯೆ ಬರಲಿಲ್ಲ ನಮಗಂಜಿನೆಲವ ಗೀಚುತಲೆ ಕುಳಿತಾರೆ ಜಾಣಿ 4
ಕಂಜಾಕ್ಷಿ ರುಕ್ಮಿಣಿ ಕರೆಯ ಬರಲಿಲ್ಲ ಸಂಜೀಲೆ ನಾವು ಬಂದೇವಸಂಜೀಲೆ ನಾವು ಬಂದೇವ ರಾಮೇಶನ ಅಂಜಿಕೆ ಇಲ್ಲೇನ ಮಡದಿಯರ ಜಾಣಿ 5
****