ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1
ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2
ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3
ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4
ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
***