Showing posts with label ಮಂಗಳಂ ಮಂಗಳಂ ತುಲಸಿದೇವಿಗೆ ಮಂಗಳಂ ರಂಗನ ಅರ್ಧಾಂಗಿಗೆ vijayaramachandra vittala. Show all posts
Showing posts with label ಮಂಗಳಂ ಮಂಗಳಂ ತುಲಸಿದೇವಿಗೆ ಮಂಗಳಂ ರಂಗನ ಅರ್ಧಾಂಗಿಗೆ vijayaramachandra vittala. Show all posts

Friday, 6 August 2021

ಮಂಗಳಂ ಮಂಗಳಂ ತುಲಸಿದೇವಿಗೆ ಮಂಗಳಂ ರಂಗನ ಅರ್ಧಾಂಗಿಗೆ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಮಂಗಳಂ ಮಂಗಳಂ ತುಲಸಿದೇವಿಗೆ ಪ


ಮಂಗಳಂ ರಂಗನ ಅರ್ಧಾಂಗಿಗೆ

ಮಂಗಳ ಮಾಧವ ಪ್ರಿಯಳಿಗೆ

ಮಂಗಳ ಭಕ್ತರ ಸಲಹುವ ತಾಯಿಗೆ

ಮಂಗಳ ಮಹಿಷಾಸುರಮರ್ದಿನಿಗೆ 1


ಮಂಗಳ ಮಂದಾರ ವನವಾಸಿಗೆ

ಮಂಗಳ ಶರಧಿ ಉದ್ಭವಳಿಗೆ

ಮಂಗಳ ರಾಮದಾಸಗಭಯವಿತ್ತವಳಿಗೆ

ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ 2


ಮಂಗಳ ನಾರದನುತ ಅಂಬೆಗೆ

ಮಂಗಳ ಸೇವಿತ ಸುರ ಸಮುದಾಯಗಳಿಗೆ

ಮಂಗಳ ಮನೋಭೀಷ್ಟದಾಯಕಳಿಗೆ

ಮಂಗಳ ಹರಿದ್ರಾ ಕುಂಕುಮನಿಡುವಳಿಗೆ 3


ಮಂಗಳ ಕೃಷ್ಣನ ಅಂತಸ್ಥಿತಳಿಗೆ

ಮಂಗಳ ಜಗನ್ಮೋಹನ ದೇವಿಗೆ

ಮಂಗಳ ಹಾಟಕ ಸಮಕಾಂತ್ಯಾವಳಿಗೆ

ಮಂಗಳ ಬೃಂದಾವನ ದೇವಿಗೆ 4


ಮಂಗಳ ಕಮಲ ಲೋಚನದೇವಿಗೆ

ಮಂಗಳ ಪೀತಾಂಬರಧಾರಿ ಸುಂದರಿಗೆ

ಮಂಗಳ ಸರ್ವಾಭರಣ ಭೂಷಿತಳಿಗೆ

ಮಂಗಳ ವಿಜಯ ರಾಮಚಂದ್ರವಿಠಲನ ರಾಣಿಗೆ 5

***

ಮಂಗಳಂ ಮಂಗಳಂ ತುಲಸಿದೇವಿಗೆ ಪ 


ಮಂಗಳಂ ರಂಗನ ಅರ್ಧಾಂಗಿಗೆ ಮಾಧವ ಮಂಗಳ ಭಕ್ತರ ಸಲಹುವ ತಾಯಿಗೆ ಮಂಗಳ ಮಹಿಷಾಸುರಮರ್ದಿನಿಗೆ 1 

ಮಂಗಳ ಮಂದಾರ ವನವಾಸಿಗೆ ಶರಧಿ ಉದ್ಭವಳಿಗೆ ಮಂಗಳ ರಾಮದಾಸಗಭಯವಿತ್ತವಳಿಗೆ ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ 2 

ಮಂಗಳ ನಾರದನುತ ಅಂಬೆಗೆ ಮಂಗಳ ಸೇವಿತ ಸುರ ಸಮುದಾಯಗಳಿಗೆ ಮಂಗಳ ಮನೋಭೀಷ್ಟದಾಯಕಳಿಗೆ ಮಂಗಳ ಹರಿದ್ರಾ ಕುಂಕುಮನಿಡುವಳಿಗೆ 3 

ಮಂಗಳ ಕೃಷ್ಣನ ಅಂತಸ್ಥಿತಳಿಗೆ ಮಂಗಳ ಜಗನ್ಮೋಹನ ದೇವಿಗೆ ಮಂಗಳ ಹಾಟಕ ಸಮಕಾಂತ್ಯಾವಳಿಗೆ ಮಂಗಳ ಬೃಂದಾವನ ದೇವಿಗೆ 4 

ಕಮಲ ಲೋಚನದೇವಿಗೆ ಮಂಗಳ ಪೀತಾಂಬರಧಾರಿ ಸುಂದರಿಗೆ ಮಂಗಳ ಸರ್ವಾಭರಣ ಭೂಷಿತಳಿಗೆ ಮಂಗಳ ವಿಜಯ ರಾಮಚಂದ್ರವಿಠಲನ ರಾಣಿಗೆ 5

***