.
ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ || ಪ. ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ || ಅ.ಪ. ||
ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ ||೧||
ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ || ೨ ||
ಧರಣಿಗೆ ಸುಖವನು ನೀಡಿದ ಸೂಕರ ಪರಮಪುರುಷನೇ ಭಾಮೆ ನಾನು
ವರಾಹರೂಪವು ನಿನ್ನ ಘುರುಘುರು ಶಬ್ದವು ಅರಿವೆ ನೀನಿಲ್ಲಿಂದ ಪೋಗೋ ರಂಗ || ೩ ||
ಬಾಲನ ತಾಪವ ಲೀಲೆಯಿಂದರಿತನ ನಾರಸಿಂಹನೆ ಭಾಮೆ ನಾನು
ಮೇಲಿದ್ದ ವಸನವು ಕ್ರೂರ ಕಾರ್ಯಾಂಗಳಲ್ಲ ಕಂಡ೦ಜುವವಳಲ್ಲ ಪೋಗೋ ರಂಗ ||೪||
ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾನು
ಕೂಸಿನ ರೂಪದಿ ಮೋಸ ಮಾಡಿದವಗೆ ದಾಸಿ ಇನ್ನೊಬ್ಬಳು ಏಕೋ ರಂಗ||೫||
ತಾತನ ಮಾತಿಗೆ ಮಾತೆಯ ತರಿದಂತ ಖ್ಯಾತಭಾರ್ಗವನು ನಾನೇ
ಮಾತೆಯ ತರಿದ ಪಾತಕಿ ನಿನಗಿನ್ನು ದೂತಿ ಇನ್ನೊಬ್ಬಳು ಏಕೋ ರಂಗ ||೬||
ದಶರಥನಂದನ ದಶಮುಖ ಭಂಜನ ಪಶುಪತಿವಂದ್ಯನೆ ಭಾಮೆ ನಾನು
ಹಸನಾದ ಏಕಪತ್ನಿವ್ರತದೊಳಿರುವ ನಿನಗೆ ಹೊಸಕನ್ನಿಕೆಯರು ಏಕೋ ರಂಗ ||೭||
ಹದಿನಾರು ಸಾಸಿರ ನೂರೆಂಟು ಸುದತಿಯರ ಬದಿಯಲ್ಲಿದ್ದವನೆ ಭಾಮೆ ನಾನು
ಕದನಕ್ಕೆ ಬೇರಿನ್ನು ಮಾರ್ಗಂಗಳಿಲ್ಲವಯ್ಯ ವದನ ಮುಚ್ಚಿಕೊಂಡು ಪೋಗೋ ರಂಗ ||೮||
ಬೌದ್ಧರ ಕುಲದಲ್ಲಿ ಹುಟ್ಟಿ ದಾನವರ ಮುಗ್ಧರ ಮಾಡಿದೆ ಭಾಮೆ ನಾನು
ಬುದ್ಧ ವಚನಂಗಳು ಎನ್ನಲಿ ಪೇಳಲು ವೃದ್ಧನಾರಿ ನಾನಲ್ಲ ಪೋಗೋ ರಂಗ ||೯||
ವರತುರಗವನೇರಿ ಧರೆಯನು ಚರಿಸಿದ ದೊರೆವೀರ ನೋಡೆ ಭಾಮೆ ನಾನು
ಕುದುರೆಯ ಚಾಕರಿಯೊಳಿರುವವಗೆ ಇನ್ನು ಯುವತಿಯ ಸುಖವಿನ್ನೆಂತೋ ರಂಗ ||೧೦||
ಸರ್ವಪ್ರಾಣಿಗಳನ್ನು ಉದರದಲ್ಲಿಟ್ಟುಕೊಂಡು ಶರಧಿಯೊಳ್ ಮಲಗಿದೆ ಭಾಮೆ ನಾನು
ದೊರೆ ಹಯವದನನ ಚರಣಕೆ ಎರಗುತ ತೆಗೆದಳು ಬಾಗಿಲ ಭಾಮೆ ಆಗ ತೆಗೆದಳು ಬಾಗಿಲ ಭಾಮೆ ||೧೧||
**
yAke bAgila hAkiruve kOkilESvari vANi || pa. ||
Aru nAnariye nI sarirAtriyali baMdI || a.pa. ||
nIroLu muLugi nigamacOrana koMda nIrajAkShane BAme nAnu
nAruva maiyya ennoLu tOrade sAri dUra nI pOgO raMga ||1||
maMdaragiriyanu bennoLagiTTa0ta suMdaravadananE BAme nAnu
iMdu ninage takka BAraMgaLillavayya siMdhuvinoLage pOgO raMga || 2 ||
dharaNige suKavanu nIDida sUkara paramapuruShanE BAme nAnu
varAharUpavu ninna GuruGuru Sabdavu arive nInilliMda pOgO raMga || 3 ||
bAlana tApava lIleyiMdaritana nArasiMhane BAme nAnu
mElidda vasanavu krUra kAryAMgaLalla kaMDa0juvavaLalla pOgO raMga ||4||
vAsavananujane vAmanarUpane nASarahitane BAme nAnu
kUsina rUpadi mOsa mADidavage dAsi innobbaLu EkO raMga||5||
tAtana mAtige mAteya taridaMta KyAtaBArgavanu nAnE
mAteya tarida pAtaki ninaginnu dUti innobbaLu EkO raMga ||6||
daSarathanaMdana daSamuKa BaMjana paSupativaMdyane BAme nAnu
hasanAda EkapatnivratadoLiruva ninage hosakannikeyaru EkO raMga ||7||
hadinAru sAsira nUreMTu sudatiyara badiyalliddavane BAme nAnu
kadanakke bErinnu mArgaMgaLillavayya vadana muccikoMDu pOgO raMga ||8||
bauddhara kuladalli huTTi dAnavara mugdhara mADide BAme nAnu
buddha vacanaMgaLu ennali pELalu vRuddhanAri nAnalla pOgO raMga ||9||
varaturagavanEri dhareyanu carisida dorevIra nODe BAme nAnu
kudureya cAkariyoLiruvavage innu yuvatiya suKavinneMtO raMga ||10||
sarvaprANigaLannu udaradalliTTukoMDu SaradhiyoL malagide BAme nAnu
dore hayavadanana caraNake eraguta tegedaLu bAgila BAme Aga tegedaLu bAgila BAme ||11||
***