Showing posts with label ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು rajesha hayamukha. Show all posts
Showing posts with label ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು rajesha hayamukha. Show all posts

Thursday, 5 August 2021

ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ದೇವಿ ನೀ ಗಿರಿಜಾತೆಯು

ನಿನ್ನಯ ಕಾಂತ ರಜತಾಖ್ಯಗಿರಿನಾಥನು

ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ


ನಿನ್ನ ಯೌವನಭಂಗದ ಭೀತಿಯ ಕಂಡು

ವಿಘ್ನೇಶನನು ಪುಟ್ಟಿಸಿ

ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ

ಕೃತಕೃತ್ಯನಾದ ನಿನ್ನರಸ ಕಾಣಮ್ಮ 1


ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು

ನೀನು ಅಂಜಲಿಕಾಸ್ತ್ರವನು ಪ್ರೇಮದಿ

ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್

ಪಾರ್ಥಸೂತನ ದಯವೆಷ್ಟೆಂಬೆ 2


ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ

ವಿಷವ ಜೀರ್ಣಿಸಿಕೊಂಡನು

ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ

ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3

***