Thursday, 5 August 2021

ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ದೇವಿ ನೀ ಗಿರಿಜಾತೆಯು

ನಿನ್ನಯ ಕಾಂತ ರಜತಾಖ್ಯಗಿರಿನಾಥನು

ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ


ನಿನ್ನ ಯೌವನಭಂಗದ ಭೀತಿಯ ಕಂಡು

ವಿಘ್ನೇಶನನು ಪುಟ್ಟಿಸಿ

ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ

ಕೃತಕೃತ್ಯನಾದ ನಿನ್ನರಸ ಕಾಣಮ್ಮ 1


ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು

ನೀನು ಅಂಜಲಿಕಾಸ್ತ್ರವನು ಪ್ರೇಮದಿ

ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್

ಪಾರ್ಥಸೂತನ ದಯವೆಷ್ಟೆಂಬೆ 2


ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ

ವಿಷವ ಜೀರ್ಣಿಸಿಕೊಂಡನು

ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ

ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3

***


No comments:

Post a Comment