..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಲಕ್ಷ್ಮೀಸ್ತುತಿ
ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ
ಪ್ರೇಮವ ಬಣ್ಣಿಸಲಸದಳ ಕಂಡ್ಯ ಪ
ಜಕ್ಕ ಜವ್ವನ ಪೋಗಬಾರದೆಂದೆನುತಲಿ
ಮಕ್ಕಳ ನಿನ್ನೊಳು ಜನಿಸನು ಕಂಡ್ಯ
ಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದ
ಅಕ್ಕರೆಯನು ಶ್ರೀದೇವಿ ನೀ ಕಂಡ್ಯ 1
ಉರದೊಳು ತೊಡೆಯೊಳು ಕೊಳಲೊಳಾಭರಣದೊಳು
ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ
ನೀರೊಳಕ್ರೂರಗೆ ಒಲಿಯುವಾಗಲು, ಮಹಾ
ನೀರೊಳು ಪ್ರಳಯದಿ ನಿನ್ನನು ಬಿಡನು 2
ರಾಜಾಧೀರಾಜರು ಬಹುದಾರರೆಂಬರು
ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ
ರಾಜೇಶಹಯಮುಖನಂಥ ಪ್ರೇಮಿಗಳುಂಟೆ
ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ 3
***
No comments:
Post a Comment