Thursday 5 August 2021

ದೇವಾಧಿದೇವ ಶ್ರೀ ತ್ರಿವಿಕ್ರಮರಾಯ ದ್ಯಾವಾ ಮ್ಯಾಲ್ನಿನ್ನ ಕಾಯ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ದೇವಾಧಿದೇವ ಶ್ರೀ ತ್ರಿವಿಕ್ರಮರಾಯ

ದ್ಯಾವಾ ಮ್ಯಾಲ್ನಿನ್ನ ಕಾಯ ||

ಪಾದನಖಾಗ್ರದಿ ಬ್ರಹ್ಮಾಂಡವನ್ನು

ಭೇದಿಸಿ ಗಂಗೆಯ ಜನಿಸಿರ್ದ ಕಾಯ ಪ


ಅಣುರೂಪದಿಂದಿದ್ದು ಕ್ಷಣದೊಳಗದ್ಭುತ

ರೂಪವ ಧರಿಸಿ ಬಲಿಯ ಬಂಧಿಸಿದೆ |

ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ

ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ 1


ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್

ನಿಂತಿದ್ದ ತೆರವತಿ ಚೋದ್ಯವಾಗಿಹುದು |

ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು

ಹರಿಭಕ್ತರ್ಗತಿ ತೋರ್ಪ ಕಾರ್ಯ 2


ಕಂಜಾಕ್ಷ ಶ್ರೀಕೃಷ್ಣಗೋಲೆಯರ್ಪಿಸಿದ

ರಾಜೇಶ ಹಯಮುಖ ದಾಸರೆಂದೆನಿಪ |

ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ

ದೇವಾಧಿದೇವ ಶ್ರೀ ತ್ರಿವಿಕ್ರಮರಾಯ 3

***


No comments:

Post a Comment