Showing posts with label ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು gurumahipati. Show all posts
Showing posts with label ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು gurumahipati. Show all posts

Wednesday, 1 September 2021

ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು|ಹೊರಗಿಂದಲಿ ಬರಲು|ಚೆಂದದಿ ರುಕ್ಷಿಣಿ ಮನದೊಳರಿತು ನುಡಿ|ಎಂದಳು ಸರಸದಲಿ ಈಗ|ನೀನು- ಪ 


ಇರುಳುಮಧ್ಯದಲಿ ಧೀರತನದಲಿ| ಸಾರಿಸಾರಿಕದನೋತ್ತುತಲಿ| ಧ್ವನಿಯ ದೋರದೆ ಗುರುತವ ಮರೆಯಿಸಿ| ದ್ವಾರದಿಸುಳಿವವನು|ನೀನು 1 

ಅಡಿಯಿಡದೆವೆ ಮೈ ಅಡಗಿಸಿಕೊಂಡು| ದೃಢದಲಿ ಅಬಲೆಯಕಂಡು| ಎಡಬಲನೊಡದೆ ಬಾಯ್ದೆರೆದು ಬೇಡುವ| ಪೊಡವಿಹಾರುವನೇನೋ|ನೀನು.....2 

ಕೊರಳಗೊಯ್ಕನೋ ವನಚಾರಕನೋ| ತುರುಗಳ ಕಾಯ್ವವನೋ| ಮರುಳು ಮಾಡಿ ನಾರಿಯರ ಠಕ್ಕಿಸಿ| ದುರುಳವಾಜಿಯನೇರಿಪನೋ|ನೀನು....3 

ಎಂದಮಾನಿನಿ ನುಡಿ ಬೆಡುಗವ ಕೇಳಿ| ನಿಂದಹರುಷ ತಾಳಿ| ಬಂದೆನಾ ಗುರುಮಹಿಪತಿ ಪ್ರಭು ಎನಲೋಡಿ| ಬಂದೆರಗಿದಳೀಗ|ನೀನು...... 4

***