Showing posts with label ಶ್ರೀಗುರುರಾಜರ ಸೇವಿಸಿರೋ ದಂಡಕಮಂಡಲ ಪಿಡಿದು shreeraghavendra. Show all posts
Showing posts with label ಶ್ರೀಗುರುರಾಜರ ಸೇವಿಸಿರೋ ದಂಡಕಮಂಡಲ ಪಿಡಿದು shreeraghavendra. Show all posts

Monday 6 September 2021

ಶ್ರೀಗುರುರಾಜರ ಸೇವಿಸಿರೋ ದಂಡಕಮಂಡಲ ಪಿಡಿದು ankita shreeraghavendra

 ankita ಶ್ರೀರಾಘವೇಂದ್ರ

ರಾಗ:[ಬೃಂದಾವನಿ]  ತಾಳ: [ಆದಿ]


ಶ್ರೀ ಗುರುರಾಜರ ಸೇವಿಸಿರೋ

ದಂಡಕಮಂಡಲ ಪಿಡಿದು ನಿಂದಿಹ ಹಸ್ತ ಭೂ-

ಮಂಡಲವೆಲ್ಲಾ ತಿರುಗಿ ಬಂದಿಹ ಹಸ್ತ

ಬಿಡದೆ ಭಕುತರಾ ಸಲಹುವ ಹಸ್ತ

ಪೊಡವಿಪತಿ ಶ್ರೀ ರಘುರಾಮರ ಸೇವಿಪ ಹಸ್ತಾ

ಭಕ್ತಲಿ ತುತಿಪರ ಎತ್ತಿ ಸಲಹುವ ಹಸ್ತಾ 

ಮತ್ತೆ ಭೂಸುರರಿಗೆಲ್ಲಾ ಅಭಯವೀಯುವ ಹಸ್ತ

ಮುಕ್ತಿಮಾರ್ಗಕೆ ದಾರಿತೋರುತಿಹ ಹಸ್ತ

ಚಿತ್ತಜನಯ್ಯನ ನೆನೆದು ಮನದಲ್ಲಿ ನಲಿಯುವ ಹಸ್ತಾ

ಭೂತಪ್ರೇತಗಳನೆಲ್ಲ ಓಡಿಸುತಿಹ ಹಸ್ತ

ಸಕಲವ್ಯಾಧಿಗಳ ಹರಿಸಿರಕ್ಷಿಪ ಹಸ್ತ

ಸುಜನರ ಉದ್ಧಾರಗೈಯುವ ಹಸ್ತ

ಸರುವದಾ ಶಿರಿಪತಿಯ ಕೊಂಡಾಡುವ ಹಸ್ತಾ

ಕನಸಿಲಿ ಬಂದು ಕಣ್ಣಪೊರೆ ತೆಗೆದಿಹ ಹಸ್ತ

ಮುದದಲಿ ಮಗಿವಿಗೆ ಮಾತಕಲಿಸಿದ ಹಸ್ತ

ರಸದಿಮುಳುಗಿ ಜೀವಕಳೆದ ಕಂದಗೆ 

ಜೀವಕಳೆತುಂಬಿದ ಹಸ್ತ

ಪರಮಪಾವನವಾದ ಶ್ರೀಗುರುರಾಜರ ಹಸ್ತಾ

ಜಗವೆಲ್ಲ ನೋಡೆ ಪ್ರಖ್ಯಾತಿ ಪಡೆದಿಹ ಹಸ್ತ

ನಗುತ ಮಂತ್ರಾಲಯದೊಳು ಬಂದು ನಿಂದಿಹ ಹಸ್ತ

ಅಗಣಿತಮಹಿಮೆ ತೋರಿ ಮೆರೆಯುತಿಹಾ ಹಸ್ತ

ಸರಿಗಾಣೆ ಧರೆಯೊಳು ಶ್ರೀರಾಘವೇಂದ್ರರ ದಿವ್ಯ ಹಸ್ತಾ

***