Showing posts with label ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ hayavadana MAATU MAATIGU KESHAVA NARAYANA MADHAVA ENABARADE. Show all posts
Showing posts with label ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ hayavadana MAATU MAATIGU KESHAVA NARAYANA MADHAVA ENABARADE. Show all posts

Friday, 31 December 2021

ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ ankita hayavadana MAATU MAATIGU KESHAVA NARAYANA MADHAVA ENABARADE

PRERANA SURESH RAO  2018










ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ - ಹೇ ಜಿಹ್ವೆ ||ಪಲ್ಲವಿ||

ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆದು ಸದ್ಗತಿಯ ಹೊಂದದೆ ವ್ಯರ್ಥ
ಮಾತುಗಳಾಡಲ್ಯಾಕೆ - ಹೇ ಜಿಹ್ವೆ ||ಅನುಪಲ್ಲವಿ||

ಜಲಜನಾಭನ ನಾಮವು ಈ ಜಗಕ್ಕೆಲ್ಲ
ಜನನ ಮರಣಹರವು
ಸುಲಭವಾಗಿಹುದು ಸುಖಕೆ ಕಾರಣವಿದು
ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ - ಹೇ ಜಿಹ್ವೆ ||೧||

ತರಳೆ ದ್ರೌಪದಿಯ ಸೀರೆ ಸೆಳೆಯುತಿರೆ
ಹರಿ ನೀನೆ ಗತಿಯೆನಲು
ಪರಮ ಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗೆ ವರವಿತ್ತ
ಹರಿನಾಮ ಪ್ರಿಯವಲ್ಲವೇ - ಹೇ ಜಿಹ್ವೆ||೨||

ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ
ನಾಮವೇ ಗತಿಯೆನಲು
ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ
ಸ್ವಾಮಿ ಹಯವದನನ ನಾಮವ ನೆನೆಯುತ್ತ
ಯಾಮ ಯಮಕೆ ಬಿಡದೆ - ಹೇ ಜಿಹ್ವೆ||೩||
***

Maatu maatige kesava narayana
Madhava enabarade he jihve ||pa||

Pratahkaladoleddu parthasarathiyendu
Pritili neneye supritanaguva hari ||a.pa||

Jalajanabana namavu I jagakkella janana marana haravu
Sulabavendenalagi sukake karanavidu
Ballida papagalannella pariharisuvudendu
Tilidu tiliyadihare he jihve ||1||

Tarale draupadi sireya seleyutire hari nine gatiyenalu
Paramapurusha bavabanjana kesava
Durulara mardisi tarunigabayavitta
Hari nammodeyanallave he jihve ||2||

Hemakasyapasambava I jagakkella namave gatiyenalu
Vamana ninemdu vandisidavarige srimadananta
Svami hayavadananu
Kamita palavivanu he jihve ||3||
***



mAtu mAtige kESava, nArAyaNa, mAdhava enabAradE ||pa|| 
prAtaH kAladaleddu pArthasArathiyanu
prItili nenedare prItanAguva hari ||apa||

jalajanABana nAmavu I jagakella janana maraNa haravu
sulaBaveMdenalAgi suKake kAraNavidu
ballida pApaMgaLella pariharisuvudeMdu 
tiLidu tiLiyadihare hE jihve ||1||

taraLe draupadi sIreya seLeyalAga
hari nIne gati enalu parama puruSha
Bava BaMjana kESava duruLara mardhisi
taraLegaBayavitta, hari namma oDeyanallavE hE jihve ||2|| 

hEma kaSyapa saMBava I jagakella
nAmave gati enalu vAmana nIneMdu
vaMdisidavarige SrImadanaMta svAmi
hayavadananu kAmita PalavIvanu hE jihve ||3||
***

ರಾಗ : ರೇಗುಪ್ತಿ   ತಾಳ : ಅಟ್ಟ (raga, taala may differ in audio)

ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ ।।ಪ॥

ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿ ।।ಅ.ಪ॥

ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ ।।೧।।

ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು
ಪರಮಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗಭಯವಿತ್ತ 
ಹರಿ ನಮ್ಮೊಡೆಯನಲ್ಲವೆ ಹೇ ಜಿಹ್ವೆ ।।೨।।

ಹೇಮಕಶ್ಯಪಸಂಭವ ಈ ಜಗಕ್ಕೆಲ್ಲ ನಾಮವೆ ಗತಿಯೆನಲು
ವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತ 
ಸ್ವಾಮಿ ಹಯವದನನು 
ಕಮಿಟ ಫಲವೀವನು ಹೇ ಜಿಹ್ವೆ ।।೩।।
***

ataana--aadi thaalamu (raga tala may differ in audio)

Maathumaathige kesava!naaraayana!
Maadhavayana baarade-he jihwe//maathu//

Praathahkaaladaleddu!paardhasaaradhiyendu!
Preethilinenedu!sadgathiya hondadevyardha//
Maathugalaadalyaake-he jihve//maathu//
Jalajanaabhana naamavu eejagakella!
Jananamarana haravu!
Sulabhavaagihadu!sukhake kaaranavidu!

Balidapaapagalannella!-pariharisuvudendu!
Thilidu thiliyadihare-he jihve//maathu.//
Tharaladroupadiyaseere!seleyuthire!
Harineenegathi yenalu!
Paramapurushabhava!bhanjanakesava!
Durularamardisi!tharunigevaravittha!
Harinaamapriyavallave-he jihwe//maathu//
Hemakasyapa sambhava!eejagakella!
Naamavegathi yenalu!
premadindalibandu!kaamithaardhagalittha!
Swaamihayavadanana!naamavaneneyuttha!
Yaamayaamake bidade-he jihva//maathu//
***
ಮಾತು ಮಾತಿಗೆ ಕೇಶವ, ನಾರಾಯಣ, ಮಾಧವ ಎನಬಾರದೇ ||ಪ|| 
ಪ್ರಾತಃ ಕಾಲದಲೆದ್ದು ಪಾರ್ಥಸಾರಥಿಯನು
ಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅಪ||

ಜಲಜನಾಭನ ನಾಮವು ಈ ಜಗಕೆಲ್ಲ ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಂಗಳೆಲ್ಲ ಪರಿಹರಿಸುವುದೆಂದು 
ತಿಳಿದು ತಿಳಿಯದಿಹರೆ ಹೇ ಜಿಹ್ವೆ ||೧||

ತರಳೆ ದ್ರೌಪದಿ ಸೀರೆಯ ಸೆಳೆಯಲಾಗ
ಹರಿ ನೀನೆ ಗತಿ ಎನಲು ಪರಮ ಪುರುಷ
ಭವ ಭಂಜನ ಕೇಶವ ದುರುಳರ ಮರ್ಧಿಸಿ
ತರಳೆಗಭಯವಿತ್ತ, ಹರಿ ನಮ್ಮ ಒಡೆಯನಲ್ಲವೇ ಹೇ ಜಿಹ್ವೆ ||೨|| 

ಹೇಮ ಕಶ್ಯಪ ಸಂಭವ ಈ ಜಗಕೆಲ್ಲ
ನಾಮವೆ ಗತಿ ಎನಲು ವಾಮನ ನೀನೆಂದು
ವಂದಿಸಿದವರಿಗೆ ಶ್ರೀಮದನಂತ ಸ್ವಾಮಿ
ಹಯವದನನು ಕಾಮಿತ ಫಲವೀವನು ಹೇ ಜಿಹ್ವೆ ||೩||
***