ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣಬಾಹ ಸಾಧನ ಒಂದೇ ಮಾಡಿ ಅಣುರೇಣುದೊಳಗಾನೆ ಗುರು ನೋಡಿ ಪ
ಖೂನ ಮಾಡಲಿಕ್ಯದ ಒಂದಭ್ಯಾಸ ಅನುದಿನ ಸದ್ಗುರು ನಿಜಧ್ಯಾಸ ಸುಜನರಿಗಿದೆ ತಾ ಉಲ್ಲಾಸಾ ಜನುಮದೊಳಿದೆ ಸುಪ್ರಕಾಶ 1
ಕೋಟಿಗೊಂದೆ ಸಾಧನವಿದೆ ಸಾಕು ಅಟಾಆಟಬಡುವದ್ಯಾತಕೆ ಬೇಕು ಘಟಮಠ ಎಂಬುವದೆಲ್ಲ ಹೋಕು ನಿಟಿಲ ಭ್ರೂಮಧ್ಯ ನೋಡಿ ಥೋಕು 2
ಸಾಧನವೆಂಬುದು ಗುರುದಯ ಇದೆ ಪಡಕೊಂಡವಗೆ ವಿಜಯ ಬೋಧಿಸಿದ ಭಾನು ಕೋಟಿ ಉದಯ ಸದ್ಗೈಸಿದ ನೋಡಿ ಮಹಿಪತಿಯ 3
*****