ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮಾಮಪಿತನ ಬಂಟ ನೆನೆವರಿಗೆ ನಂಟ ಪ.
ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ 1
ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ 2
ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ 3
ಬಕಹಿಡಿಂಬಕಿಮ್ಮೀರರಿಪುವೆ ಘನಸಮೀರನಖಾಗ್ರದಲಿ ಕೊಂದೆ ರಣಾಗ್ರದಲಿ ನಿಂದೆಭಕುತಿಯಲಿ ನಿನ್ನಪಾದ ಭಜಿಸುವವರಿಗೆ ಮೋದ 4
ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ 5
***