..
ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ
ಇಲ್ಲೆ ಶ್ರೀಹರಿಯಿಲ್ಲವೆ ಪ
ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ
ರೆಲ್ಲ ವಸ್ತುಗಳಲ್ಲಿ ತುಂಬಿ ಸೂಸುತಲಿರುವ ಅ.ಪ
ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು
ಘಾಸಿಗÉೂಳ್ಳುವೆ ಏತಕೋ
ವಾಸನೆಯ ನೀಗದವನಾಶೆಪಾಶಗಳಿಂದ
ಬೇಸತ್ತು ಚರಿಸಲೇಕೋ
ಈಶನಾವಾಸವೀಜಗವೆಲ್ಲವಿಲ್ಲಿಲ್ಲ
ವಲ್ಲಿರುವನೆಂಬುದೇಕೋ
ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ
ಆಸೆಯುದಯಿಸಲಿಲ್ಲವೇಕೋ 1
ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ
ಗುಣ ಮಹಿಮನರಿಯ ಬಯಸೋ
ಎಣಿಸಲಾಗದನಂತಗುಣನ ಪ್ರಾಣಿ ಸಮೂಹ
ಗಣಗಳೊಳು ಕಾಣಬಯಸೋ
ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ
ಕಣ್ದಣಿಯೆ ಕಾಣುತ ಭಾವಿಸೊ
ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು
ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ 2
ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ
ಫಲವೇನು ವ್ಯರ್ಥಶ್ರಮವೋ
ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ
ಮಾಡಿದರು ವ್ಯರ್ಥಶ್ರಮವೋ
ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ
ದಾನವದು ವ್ಯರ್ಥಶ್ರಮವೋ
ಅಕಳಂಕಮಹಿಮ ರಘುರಾಮವಿಠ್ಠಲನೆಂದು
ನಂಬಿ ನಡೆವುದೆ ಸಾರ್ಥಕವೋ 3
****