Showing posts with label ನೆನೆದು ನಮಿಸುವೆ ನಾನು ವಾರಂವಾರ mahipati. Show all posts
Showing posts with label ನೆನೆದು ನಮಿಸುವೆ ನಾನು ವಾರಂವಾರ mahipati. Show all posts

Wednesday, 1 September 2021

ನೆನೆದು ನಮಿಸುವೆ ನಾನು ವಾರಂವಾರ ankita mahipati

 ನೆನೆದು ನಮಿಸುವೆ ನಾನು ವಾರಂವಾರ ಪ  


ನೆನೆದು ನಮಿಸುವೆ ನಾನನುದಿನ ಹರಿಪದ ವನಜ ಮಧುಪರಾದ ಅನುಭವ ಶರಣರ ಅ.ಪ 


ಆದಿಮೂರುತಿತ್ರಯ ಮಧ್ವಮುನಿರೇಯ ಪದ್ಮನಾಭ ನರಹರಿ ಧ್ಯಾನ ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ ರಾಧಕ ವಿದ್ಯಾದಿರಾಜ ಕವಿನಿಧಿ ಸಾದರ ವಾಗೀಂದ್ರ ಶಾಂತ ರಾಮಚಂದ್ರ ಸಾಧು ವಿದ್ಯಾನಿಧಿಯರ ರಘುನಾಥ ಮೇದಿನಿ ರಘುವರ್ಯರ ರಘೋತ್ತಮ ವೇದವ್ಯಾಸಾರ್ಯರ ವಾರಂವಾರ 1 

ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ ಸತ್ಯವ್ರತರ ನಾಮ ಸತ್ಯನಿಧಿಯ ನೇಮ ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ ಇತ್ಯಧಿಕ ಸರ್ವರ ಜನದಲಿ ಅತ್ಯಧಿಕ ಮೀರ್ವರಾ ಪುರುಷಾರ್ಥ ಉತ್ತಮ ಪದಲಿರುವರಾ ವಾರಂ ವಾರ 2 

ಶರಣೆಂದು ಆದ್ಯರ ಸಕಲ ಪ್ರಸಿದ್ಧರ ಶುಭ ವ್ಯಾಸರಾಯರ ವರ ಹಯಗ್ರೀವ ಜಗವರಿತ ವಾದಿರಾಜ ಪುರಂದರದಾಸ ಪುತ್ರರಾ ವರ ಮಧ್ವರಾ ನೆರೆ ತಾಳ ಪಾಕರ ನುತ ಮತಿ ಕನಕರ ಹರಿಭಕ್ತಿ ಉಲ್ಹಾಸರ ಬಂಡೆರಂಗ ನರಿತಿಹ ನಿಜದಾಸರ ಮಹಿಪತಿ ಗುರುಶರಣರ ತೋಷರ ವಾರಂ ವಾರ 3

****