ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ
ಬಡವರ ಬಂಧು ಬಹುಕೃಪಾಸಿಂಧು
ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ.
ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ
ಅತಿಪಾತಕಿ ಅಜಾಮಿಳನ ಉದ್ಧರಿಸಿದೆ
ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1
ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ
ಬಳಲಿಸಬ್ಯಾಡವೊ ಭಕ್ತಕುಟುಂಬಿ
ನಳಿನದಳಾಂಬಕ ನೀ ಸಲಹೆನ್ನನು 2
ಸಾರಿ ಹೇಳುವೆ ಎನ್ನ ಬಳಗದ ಅರಭಾರವು ನಿನ್ನದು
ಹೇರೊಪ್ಪಿಸಿದ ಮೇಲ್ಯಾತರ ಸುಂಕವು
ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
***
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ | ಬಿಡಬೇಡವೊ ಕೈಯ್ಯ
ಬಡವರ ಬಂಧು ಬಹು ಕೃಪಾಸಿಂಧು |
ಒಡೆಯ ನೀನಲ್ಲದೆ ನಮಗೆ ಬ್ಯಾರಿಲ್ಲವೊ || PA ||
ಶತ ಅಪರಾಧವ ಮಾಡಿದೆನಯ್ಯ | ಸೇರಿದೆ ನಾ ನಿನ್ನ ಬೆನ್ನಾ
ಅತಿ ಪಾತಕಿ ಅಜಾಮಿಳನ ಉದ್ಧರಿಸಿದೆ |
ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ || 1 ||
ನೆಲೆಗಾಣದೆ ನಾನಾ ಪರಿ ಚಿಂತಿಸಿ | ಒಳಗಾದೆನೊ ಹೀಗೆ
ಬಳಲಿಸಬ್ಯಾಡವೊ ಭಕ್ತಕುಟುಂಬಿ |
ನಳಿನದಳಾಂಬಕ ನೀ ಸಲಹೆನ್ನನು || 2 ||
ಸಾರಿ ಹೇಳುವೆ ಎನ್ನಯ ಬಳಗದ | ಆರಭಾರ ನಿನ್ನದು
ಹೇರೊಪ್ಪಿಸಿದ ಮ್ಯಾಲ್ಯಾತರ ಸುಂಕವು |
ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯಾ || 3 ||
***
Kaḍegaṇṇali nī nōḍadirennayya | biḍabēḍavo kaiyya baḍavara bandhu bahu kr̥pāsindhu |
oḍeya nīnallade namage byārillavo || PA ||
śata aparādhava māḍidenayya | sēride nā ninna bennā ati pātaki ajāmiḷana ud’dhariside | pr̥thiviyoḷage birudānta śrīkānta || 1 ||
nelegāṇade nānā pari cintisi | oḷagādeno hīge baḷalisabyāḍavo bhaktakuṭumbi | naḷinadaḷāmbaka nī salahennanu || 2 ||
sāri hēḷuve ennaya baḷagada | ārabhāra ninnadu hēroppisida myālyātara suṅkavu | kāruṇyanidhi heḷavanakaṭṭe raṅgayyā || 3 ||
Plain English
Kadegannali ni nodadirennayya | bidabedavo kaiyya badavara bandhu bahu krpasindhu |
odeya ninallade namage byarillavo || PA ||
sata aparadhava madidenayya | seride na ninna benna ati pataki ajamilana ud’dhariside | prthiviyolage birudanta srikanta || 1 ||
neleganade nana pari cintisi | olagadeno hige balalisabyadavo bhaktakutumbi | nalinadalambaka ni salahennanu || 2 ||
sari heluve ennaya balagada | arabhara ninnadu heroppisida myalyatara sunkavu | karunyanidhi helavanakatte rangayya || 3 ||
***