Showing posts with label ನಾರಾಯಣಾದ್ರಿ ಕೃತವಾಸ ಶರಣು jagannatha vittala. Show all posts
Showing posts with label ನಾರಾಯಣಾದ್ರಿ ಕೃತವಾಸ ಶರಣು jagannatha vittala. Show all posts

Saturday, 14 December 2019

ನಾರಾಯಣಾದ್ರಿ ಕೃತವಾಸ ಶರಣು ankita jagannatha vittala

ಜಗನ್ನಾಥದಾಸರು
ನಾರಾಯಣಾದ್ರಿ ಕೃತವಾಸಾ ಶರಣು l
ತೋರೈ ತವರೂಪ ರವಿಕೋಟಿಭಾಸಾ ll ಪ ll

ಆನತ ಜನಾಪ್ತ ನೀನೆಂಬೊ ನುಡಿಗೇಳಿ ಮಿಗೆ l
ಸಾನುರಾಗದಲಿ ನಡತಂದ ನಿನ್ನಯ ಬಳಿಗೆ l
ಮೀನಾಂಕಜನಕ ತವ ಪದಯುಗಾರ್ಚನೆ ಹೀಗೆ l
ಜ್ಞಾನ ಪೂರ್ವಕದಿಂದಲೆಸಗೆ l
ಪಾನೀಯಜಾಮ್ಬಕನೆ ಪೊರೆಯಂದೆ ನಿನಗೆ ll 1 ll

ವಾಸುಕಿ ತಪಕೆ ಸಲೆ ಮೆಚ್ಚಿ ಗಿರಿಯಲಿ ನಿಂದೆ l
ಆ ಸಲಿಲದೊಳು ನಿಂದು ಕರಿವರ ಕರಿಯೆ ಬಂದೆ l
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ l
ಆ ಸಮರದೊಳಗೊಲಿವೆನೆಂದೆ ನಿನಗೆ l
ಪಾಸಟಿನ್ನಾರು ನೀರಜಭವನ ತಂದೆ ll 2 ll

ಪೊಗಳಲರಿಯರು ಸುರರು ನಿನ್ನ ಮಹಿಮಾತಿಶಯ l
ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ l
ಮುಗುಧ ಮಾನವ ತಿಳಿವದೇನೊ ತಿರುಮಲರಾಯ l
ಖಗರಾಜಗಮನ ಕಮನೀಯ ಪಾಹಿ l
ಜಗನ್ನಾಥವಿಠಲ ವಿಗತಾಘ ವಿಧುಗೇಯಾ ll 3 ll
******
ನಾರಾಯಣಾದ್ರಿ ಕೃತವಾಸ ಶರಣು
ತೋರಯ್ಯ ತವರೂಪ ರವಿಕೋಟಿಭಾಸ ಪ

ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ
ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ
ಮಿನಾಂಕಜನಕ ತವಪದಯುಗಾರ್ಚನೆ ಹೀಗೆ
e್ಞÁನ ಪೂರ್ವಕದಿಂದಲೆನಗೆ ದಯದಿ
ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ 1

ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ
ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ
ಆ ಸಮರದೊಳಗೊಲಿವನೆಂದೆ ನಿನಗೆ
ಪಾಸಟಿ ಯಾರು ನೀರಜಭವನ ತಂದೆ 2

ಸುರರು ನಿನ್ನ ಮಹಿಮಾತಿಶಯ
ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ
ಮಾನವ ತಿಳಿವನೆನೋ ತಿರುಮಲರಾಯ
ಖಗÀರಾಜಗಮನ ಕಮನೀಯ ಪಾಹಿ
ಜಗನ್ನಾಥವಿಠಲ ವಿಗತಾಘ ಕವಿಗೇಯ 3
*********