Showing posts with label ಬಂದಾನು ರಾಘವೇಂದ್ರ ಮಹಾರಥದೀ lakumeesha. Show all posts
Showing posts with label ಬಂದಾನು ರಾಘವೇಂದ್ರ ಮಹಾರಥದೀ lakumeesha. Show all posts

Monday 6 September 2021

ಬಂದಾನು ರಾಘವೇಂದ್ರ ಮಹಾರಥದೀ ankita lakumeesha

ankita ಲಕುಮೀಶ 

ರಾಗ: [ಹಿಂದೋಳ] ತಾಳ: [ಆದಿ]


ಬಂದಾನು ರಾಘವೇಂದ್ರ ಮಹಾರಥದೀ 

ಬಂದಾನು ರಾಘವೇಂದ್ರ ಮಂತ್ರಾಲಯದಿ 


ಸುಂದರ ವದನಾರವಿಂದ ಮುನೀಂದ್ರನು

ವಂದಿಪಸುಜನಕೆ ಸಂದೋಹವರವೀವ  ಅ ಪ


ಸುಶಮೀಂದ್ರ ಕೃತ ದಿವ್ಯ ಮುನ್ನೂರ ಮೂವತ್ತ

ವಿಷು ಅಬ್ದ ಆರಾಧನೆ ಶ್ರಾವಣ ಕೃಷ್ಣಪಕ್ಷದೀ

ಎಸೆವ ತದಿಯ ಶ್ರೇಷ್ಠ ಕುಜವಾರ ದಿನದಂದು

ದಶಗ್ರೀವ ವೈರಿ ಧ್ಯಾನ ಹಸನಾಗಿ ಮಾಡುತಾ

ಕಸಿವಿಸಿ ನಾನಾ ವ್ಯಸನ ಭವಾಬ್ಧಿಯ

ನಸುನಕ್ಕು ದಾಟಿಸಿ ಸುಜನರ ರಕ್ಷಿಸೇ   1

ಮುಂಭಾಗದಲಿ ಬಲು ಗಾಂಭೀರ್ಯ ಗಮನದಿ

ಅಂಬಾರಿ ಗಜದಿಂದ ತುಂಬಾ ಜನಕೆ ಶೋಭಿಸೇ

ಕೊಂಬು ಕಹಳೆನಾದ ತಂಬಟಿ ನಾನಾ ವಾದ್ಯ

ಇಂಪಾದ ನಾಗಸ್ವರ ಸಂಭ್ರಮ ಛತ್ರಿ ಶೋಭಿಸೇ

ಕುಂಭಿನಿಸುತೆ ಶೀ ರಾಮಲಕ್ಷ್ಮಣ ವಾಯು

ಹಂಬಲ ವೇಷದಿ ತುಂಬೆ ಶೃತಿಯ ಘೋಷಾ  2

ಪ್ರಹ್ಲಾದ ವ್ಯಾಸರಾಜ ಉಲ್ಹಾಸದಿ ವರನೀಡೆ

ಚೆಲ್ವರಾಯರ ನಾಮ ಜಯ ಘೋಷದೀ

ಅಲ್ಲಲ್ಲಿ ಗುಂಪು ಭಕ್ತೆರಲ್ಲಾಭೀಷ್ಟಗಳ

ಸಲ್ಲಿಸುಯಂತೆಂದು ತಂಡೋಪ ತಂಡ ಪ್ರಾರ್ಥಿಸೇ

ಮಲ್ಲರಮುರಿದ ಶ್ರೀ ಲಕುಮೀಶ ದೇವನ

ನಿಲ್ಲದೆ ಪ್ರಾರ್ಥಿಸೆ ಅಭಯವ ನೀಡುತಾ  3

***