ಶ್ರೀ ಸತ್ಯಸಂಧತೀರ್ಥರ ಪೂರ್ವಾರಾಧನಾ ಪ್ರಯುಕ್ತ ಗುರುಸ್ಮರಣೆ
ಸತ್ಯಬೋಧ ಕುವರಾ, ಯತಿವರಾ,
ಸತ್ಯಸಂಧ ಗುರುವರಾ, ಶ್ರೀಕರಾ/
ನಿತ್ಯದಲ್ಲಿ ಹರಿಪಾದ ಸ್ಮರಣೆಯಾ,
ಅತ್ಯಲ್ಪ ಮತಿಯೋಳೆನ್ನ ತಾರೆಯಾ//**//
ಇಂಥ ಸುಗುಣವಂತರಾ, ನಾನೆಲ್ಲಿ,
ಚಿಂತಿಸಲನ್ಯರೋಳ್, ತೋರದಿಲ್ಲಿ/
ಸಂತತ ಹರಿಯಾ ಮೋದದಿ ಭಜಿಸುತಾ,
ಕಾಂತ ಸೀತೆಯಾ ನಿತ್ಯ ಧ್ಯಾನಿಪರಾ//೧//
ಏನು ಮಹಿಮೆ, ಅಲ್ಪಾ ಮತಿಯಾ,
ಅಣುಗ ಪೇಳಲರಿಯೇ/ ಅಮರ -
ಗಣನುತ ರಾಮ ಪೂಜೆಯಿಂ,
ಸುಗುಣಮುನಿ ಸದ್ವ್ರತರ ನಲಿಸಿದಾ//೨//
ರಾಮ ಪೂಜೆಗೆಂದು ತಂದಿಹ,
ಕಮಲವು ನ್ಯೂ(೨)ನವಾಗೇ,
ಕಮಲೆಗೇರಿಸೇ ರಾಮನಿತ್ತಿಹಾ,
ಸುಮ-ದ, ಧನ್ಯ, ವಿಮಲಾರ್ಚಾರ್ಚಕರಾ//೩//
ಮಹಿಷೀ ಕ್ಷೇತ್ರದೊಳಗೇ, ವರ
ಅಹಿ(-)ಶಯನನ ಧೇನಿಸುತಾ,
ದೇಹಿ ಎಂಬರಾ, ಇಷ್ಟಸಿದ್ಧಿದರಾ,
ಅಹೋ! ಸುವೃಂದಾವನ ಭೂಷಿತರಾ//೪//
ಸತ್ಯಧರ್ಮ ಮುನಿಪ ತರಳ,
ನಿತ್ಯದೀ ಬೇಡುವೆ ನಾ/
ಅತ್ಯಗಾಧ ಮತ್ಯಾರಾಧಕ, ಭಾ-
ರತೀಶಪ್ರಿಯಹಯವದನಗೆ ಪ್ರಿಯರಾ/೫//
***