..
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ
ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ |
ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ
ನಮಿಪ ಜನರಿಗೆ ಅಮರ ಭೂರುಹ
ಸಮಸುಖಪ್ರದ ವಿಮಲ ಚರಿತನೆ
ಯಮಿವರ್ಯ ಸುವೃತೀಂದ್ರ ಮಾನಸ
ಕಮಲರವಿ ಮಹಿ ಸುಮನಸಾಗ್ರಣಿ ಅ.ಪ
ಅಸಮ ಮಹಿಮೋದರ | ತವಸುಪ್ರಭಾವವ
ವಶವೆ ಪೊಗಳಲು ಧೀರಾ | ಸುಜನ ವಂದಿತ
ಸ್ವಶನ ಸುಮತೋದ್ಧಾರ || ದಯ ಪಾರವಾರ ||
ವಸುಧೆಯೊಳು ಮೊರೆಹೊಕ್ಕ ಜನರಿಗೆ
ಕುಶಲಪ್ರದ ನೀನೆಂದು ಬುಧ ಜನ
ಉಸುರುವದು ನಾ ಕೇಳಿ ನಿನ್ನ ಪದ
ಬಿಸಜ ನಂಬಿದೆ ಪೋಷಿಸನುದಿನ 1
ದೀನಜನ ಸುಖದಾತ | ಸುಕೃತೀಂದ್ರ ಕೋಮಲ
ಪಾಣಿ ಪದ್ಮ ಸುಜಾತ | ಜಯವಂತ ಜಿತಸ್ಮರ
ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ ||
ಕ್ಷೋಣಿಯೊಳು ನೀ ಒಲಿದ ಮಾತ್ರದಿ
ಮೌನಿವರ್ಯ ಶ್ರೀ ರಾಘವೇಂದ್ರರು
ಸಾನುರಾಗದಿ ಸಲಹುವರು ಪವ
ಮಾನ ಶಾಸ್ತ್ರ ಪ್ರವೀಣ ಜಾಣ 2
ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ
ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ
ಮಂಗಳಾಂಗ ಯತೀಶ | ಪಾಪೌಘನಾಶ ||
ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ
ಭೃಂಗ ಭವಗಜಸಿಂಗ ಕರುಣಾ
ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
***