..
ಕಾಮಿನಿ ಮಣಿ ಗರಿಗಾಮಿನಿ ಸುಖವಾಣಿ ಪ
ವರಮೌಕ್ತಿಕ ಮಣಿಮಯ ಪೀಠಿಕೆ ಬಾಗುಣ ಶ್ರೇಣಿ
ಮರುಗು ನಾಗ ಸುರಗೆ ಜಾಜಿ
ಸರಸ ಸೂಮಾಲೆ ಧರಿಸಿ
ವರಶೃಂಗಾರಳಾಗುತಲಿ 1
ಅಗರು ಗಂಧ ಚಂದನವನು
ಮೃಗ ಮದ ಗಜ ಜೌವ್ವನವನು
ಮಿಗೆ ಶ್ರೀ ಲೇಪಳಾಗುತಲಿ 2
ಶಾಮಸುಂದರನಂಘ್ರಿ ಕಮಲ
ಭಾಮಿನಿನೀನು ಮನದಿ ಸ್ಮರಿಸೆ
ಕೋಮಲಾಂಗಿ ಶಶಿವದನೆ 3
***