Showing posts with label ತೆರಳಿದರು ವಿಜಯರಾಯರು ವಿಜಯ ವಿಠಲ jagannatha vittala TERALIDARU VIJAYARAYARU VIJAYA VITTALA VIJAYA DASA STUTIH. Show all posts
Showing posts with label ತೆರಳಿದರು ವಿಜಯರಾಯರು ವಿಜಯ ವಿಠಲ jagannatha vittala TERALIDARU VIJAYARAYARU VIJAYA VITTALA VIJAYA DASA STUTIH. Show all posts

Sunday, 5 December 2021

ತೆರಳಿದರು ವಿಜಯರಾಯರು ವಿಜಯ ವಿಠಲ ankita jagannatha vittala TERALIDARU VIJAYARAYARU VIJAYA VITTALA VIJAYA DASA STUTIH

ತೆರಳಿದರು ವಿಜಯರಾಯರು ವಿಜಯ ವಿಠಲನ
ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||pa||

ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ
ರವು ಗುರುವಾರ ಪ್ರಥಮ ಯಾಮದೀ
ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ
ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ||1||

ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ
ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ
ವರ ಭಾಗವತ ಬ್ರಹ್ಮಸೂತ್ರ ಭಾರತ ಗೀತ
ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ ||2||

ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ
ನಿಕರಗಳ ಕವನ ರೂಪದಲ್ಲಿ ರಚಿಸಿ
ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ
ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ ||3||
***