Showing posts with label ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ shree krishna NINAGAARU SARIYILLA ENAGANYA GATI YILLA. Show all posts
Showing posts with label ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ shree krishna NINAGAARU SARIYILLA ENAGANYA GATI YILLA. Show all posts

Thursday, 4 November 2021

ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ ankita shree krishna NINAGAARU SARIYILLA ENAGANYA GATI YILLA

 

SUNG AS SHREEKRISHNA ANKITA

check ಕೃತಿ also by ಪುರಂದರದಾಸರು 

ನಿನಗಾರು ಸರಿಯಿಲ್ಲ-ಎನಗನ್ಯ ಗತಿಯಿಲ್ಲ ಪ


ನಿನಗೂ ನನಗೂ ನ್ಯಾಯ ಪೇಳುವರಿಲ್ಲ ಅ.ಪ


ಒಂದೇ ಗೂಡಿನೊಳು ಒಂದು ಕ್ಷಣವಗಲದೆಎಂದೆಂದು ನಿನ್ನ ಪಾದ ಪೊಂದಿರುವೆಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂದಗಾರನಂತೆ ನೋಡುವುದುಚಿತವೆ1


ಪರ ಸತಿಗಳುಪಲು ಪರಮ ಪಾತಕಿಯೆಂದುಪರಿ ಪರಿ ನರಕಕ್ಕೆ ಗುರಿಮಾಡುವಿಪರಸತಿಯರ ಒಲುಮೆ ನಿನಗೊಪ್ಪಿತೆಲೊ ಕೃಷ್ಣದೊರೆತನಕಂಜಿ ನಾ ಶರಣೆಂಬೆನಲ್ಲದೆ 2


ನಿನ್ನಾಜ್ಞದವನೊ ನಾ ನಿನ್ನ ಪ್ರೇರಣೆಯಿಂದಅನ್ನಂತ ಕರ್ಮವ ನಾ ಮಾಡಿದೆಎನ್ನವಗುಣಗಳನೆಣಿಸಲಾಗದೊ ಸ್ವಾಮಿಮನ್ನಿಸಿ ಸಲಹಯ್ಯ ಪರಮ ಪುರುಷ ಕೃಷ್ಣ 3

***