..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಏನು ಪೇಳಲಿ ನಿನ್ನ ತನಯನ ಚರ್ಯವ
ಮಾನಿನಿಮಣಿಯೆ ಯಶೋದೆಯ ಕೇಳೆ 1
ವಾರಿಧಿಯೊಳು ಪೊಕ್ಕು ವಿಹರಿಸುವನೆ ಮತ್ತು
ಭಾರಿಯಾದ ಕ್ಷಿತಿಧರೆಯನೆ ಹೊರುವನೆ 2
ಕುಂಭಿಣಿಯನೆ ಅತಿ ಸಂಭ್ರಮದಲ್ಲಿ ತಂದು
ಸ್ತಂಭವ ಭೇದಿಸಿ ಸಂಭವಿಸಿದನಲ್ಲಿ 3
ಮೂರು ಹೆಜ್ಜೆಯ ಭೂಮಿ ಬೇಡಿದನೇ ಏಳು
ಮೂರು ಬಾರಿ ನೃಪತಿಗಳ ಭೇದಿಸಿದನು 4
ವಾನರರನು ಸೇರಿ ಜಾನಕಿಯನೆ ತಂದೆ
ಮಾನವ ಕುಲಕೆ ಸನ್ಮಾನವ ತಂದನೆ 5
ಘೋರ ಪೂತನಿ ಪ್ರಾಣ ಹಾರ ಮಾಡಿದ ಜಾರ
ಚೋರತನದಿ ಶೂರನಾದನೆ ನೋಡೆ 6
ಬತ್ತಲೆ ನಿಂತನೆ ಸಸ್ತಿಯನೇರಿದ
ಮತ್ತು ನಾಮಗಿರಿ ನರಹರಿ ಇವನೆ 7
***