Showing posts with label ಪಾರ್ವತೀ ಪತಿಪಾಹಿ ಹರಹರ ಪಾರ್ವತೀಪತಿ ನೀನೊಲಿದು pranesha vittala PAARVATI PATI PAAHI HARAHARA PAARVATI PATI NEENOLIDU. Show all posts
Showing posts with label ಪಾರ್ವತೀ ಪತಿಪಾಹಿ ಹರಹರ ಪಾರ್ವತೀಪತಿ ನೀನೊಲಿದು pranesha vittala PAARVATI PATI PAAHI HARAHARA PAARVATI PATI NEENOLIDU. Show all posts

Saturday 4 December 2021

ಪಾರ್ವತೀ ಪತಿಪಾಹಿ ಹರಹರ ಪಾರ್ವತೀಪತಿ ನೀನೊಲಿದು ankita pranesha vittala PAARVATI PATI PAAHI HARAHARA PAARVATI PATI NEENOLIDU



by ಪ್ರಾಣೇಶದಾಸರು

.ಪಾರ್ವತೀಪತಿ ಪಾಹಿ ಹರಹರ ||ಪ||

ಪಾರ್ವತೀಪತಿ ನೀನೊಲಿದು ಮನಸಿನೊಳು
ತೋರ್ಪುದು ಕೇಶವನ ಹರಹರ  ||ಅಪ||

ವಿಜಯ ನಿನ್ನೊಳಗಂದು ವಿಜಯಿಸಲಸ್ತ್ರವ
ತ್ರಿಜಗವರಿಯ ಕೊಟ್ಟ
ಮಜ ಭಾಪುರೆ ಅಂಬುಜಸುತನಂದನ
ಗಜಚರ್ಮಾಂಬರನೆ ಹರಹರ ||೧||

ಜಾತವೇದಸ ಶಶಿತರಣಿನಯನ
ಮಾತರಿಶ್ವತನಯ
ಭೂತ ಗಣಪ ಗುಣವ್ರಾತ ನಿನ್ನವರೊಳು
ಪ್ರೀತಿಯಿಂದಲೆ ಕೂಡಿಸು ಹರಹರ ||೨||

ಕ್ಷಿತಿಧರ ಶರ ಮನ್ಮಥ ಪುರಹರಣ ಪ್ರ -
ಮಥಾಧಿಪ ಹರಿಣಾಂಕ
ನುತಿಸುವೆ ನಿನ್ನನು ಪ್ರತಿದಿನದಲಿ ಸ -
ನ್ಮತಿ ಕರುಣಿಸು ತ್ವರಿಯಾ ಹರಹರ ||೩||

ಸುರಸೇವಿತಪದಾರವಿಂದ ಅನಘ
ಮುರರಿಪು ಸಖ ಕಪರ್ದಿ
ಚರಣವ ನಂಬಿದವರ ಭಯವಾರಿದ
ಮರುತ ಕುಶನಂದನನೆ ಹರಹರ ||೪||

ಖಟವ ಪಾಣಿ ಖಳ ಆಟವಿ ವಹ್ನಿ ಧೂ -
ರ್ಜಟಿ ಹರ ಪ್ರಾಣೇಶ -
ವಿಠಲನ ಭಜನೆಯು ಘಟಿಕ ತಪ್ಪದಲೆ 
ಘಟನೆ ಮಾಡಿಸುವುದೋ ಹರಹರ ||೫||
***

paarvatIpati paahi harahara ||pa||

paarvatIpati nInolidu manasinoLu
tOrpudu kESavana harahara  ||apa||

vijaya ninnoLagaMdu vijayisalastrava
trijagavariya koTTa
maja bhaapure aMbujasutanaMdana
gajacarmaaMbarane harahara ||1||

jaatavEdasa SaSitaraNinayana
maatariSvatanaya
bhUta gaNapa guNavraata ninnavaroLu
prItiyiMdale kUDisu harahara ||2||

kShitidhara Sara manmatha puraharaNa pra -
mathaadhipa hariNaaMka
nutisuve ninnanu pratidinadali sa -
nmati karuNisu tvariyaa harahara ||3||

surasEvitapadaaraviMda anaGa
muraripu saKa kapardi
caraNava naMbidavara bhayavaarida
maruta kuSanaMdanane harahara ||4||

KaTava paaNi KaLa ATavi vahni dhU -
rjaTi hara praaNESa -
viThalana bhajaneyu GaTika tappadale 
GaTane maaDisuvudO harahara ||5||
***

ಪಾರ್ವತೀ ಪತಿಪಾಹಿ ಹರಹರ ಪ

ಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||

ವಿಜಯನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||ಮಜ ಭಾಪುರೆಅಂಬುಜಸುತ ನಂದನ |ಗಜಚರ್ಮಾಂಬರನೆ | ಹರಹರ 1

ಜಾತವೇದಸಶಶಿತರಣಿನಯನ |ಮಾತರಿಶ್ವತನಯ ||ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ 2

ಕ್ಷಿತಿಧರ ಶರ ಮನ್ಮಥಪುರಹರಣ| ಪ್ರಮಥಾಧಿಪ ಹರಿಣಾಂಕ ||ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ3

ಸುರಸೇವಿತ ಪದ ಅರವಿಂದಅನಘ|ಮುರರಿಪುಸುಖಕಪರ್ದಿ||ಚರಣವ ನಂಬಿದವರ ಭಯವಾರಿದ |ಮರುತಕುಶನಂದನನೆ || ಹರಹರ4

ಖಟವಪಾಣಿಖಳಆಟವಿವಹ್ನಿಧೂ |ರ್ಜಟ ಹರ ಪ್ರಾಣೇಶ ||ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ 5
*******