Showing posts with label ರಾಮನಾಥಸ್ವಾಮಿ ಪಾಲಿಸೋ ರಘುನಾಥಸ್ವಾಮಿ others. Show all posts
Showing posts with label ರಾಮನಾಥಸ್ವಾಮಿ ಪಾಲಿಸೋ ರಘುನಾಥಸ್ವಾಮಿ others. Show all posts

Friday, 27 December 2019

ರಾಮನಾಥಸ್ವಾಮಿ ಪಾಲಿಸೋ ರಘುನಾಥಸ್ವಾಮಿ others

by ಗೋವಿಂದದಾಸ
ರಾಮನಾಥಸ್ವಾಮಿ ಪಾಲಿಸೋ |ರಘುನಾಥಸ್ವಾಮಿ ಪಾ
ಲಿಸೊ ಪ

ಪಾಮರನಾದೆನ್ನಪರಾಧವ |ಪ್ರೇಮದಿ ಪಾಲಿಸಿಕೊಳ್ಳೋ ದೇವಾಚಭೂಮಿಜೆಸೀತೆಗೆ | ಪ್ರೇಮನೆಂದೆನಿಸಿದ1

ನಿನ್ನನು ನಂಬಿದ ನಾಥನನೂ |ಮನ್ನಿಸದಿರೆ ಕೇಳ್ವರ್ಯಾರೋ ಇನ್ನೂ ||ಸನ್ನುತಗುಣಾಕರನೆನ್ನುವ ಬಿರುದನು |ಎನ್ನೊಳು ತೋರಿಸೊ ರಾಮ ನೀನೂ2

ಎಂದಿಗೆ ನಿನ್ನಯ ಪಾದವನೂ |ಪೊಂದುವ ಸುಖವನು ಪೇಳೋ ನೀನೂ |ಮಂದರಧರಗೋವಿಂದನೆ ನಿನ್ನಯ |ಸುಂದರ ಚರಣಕೆ ನಮಿಸುವೆನೂ
********