Showing posts with label ಸಲಹು ಸುಖತೀರ್ಥಮತ prasannavenkata SALAHU SUKHTEERTHAMATA SUMATEENDRA TEERTHA STUTIH. Show all posts
Showing posts with label ಸಲಹು ಸುಖತೀರ್ಥಮತ prasannavenkata SALAHU SUKHTEERTHAMATA SUMATEENDRA TEERTHA STUTIH. Show all posts

Saturday, 20 February 2021

ಸಲಹು ಸುಖತೀರ್ಥಮತ ankita prasannavenkata SALAHU SUKHTEERTHAMATA SUMATEENDRA TEERTHA STUTIH

Audio by Vidwan Sumukh Moudgalya

  

" ಸಲಹು ಸುಖತೀರ್ಥಮತ ಜಲಧಿಚಂದ್ರ "- ಶ್ರೀ ಪ್ರಸನ್ನವೆಂಕಟದಾಸರ ರಚನೆ

 ರಾಗ : ಶ್ರೀರಂಜನಿ


ಸಲಹು ಸುಖತೀರ್ಥ ಮತ 

ಜಲಧಿ ಚಂದ್ರ ।

ನಳನೀಶಾರ್ಚಕ ಇಂದ್ರ 

ಇಳೆಗೆ ಸುಮತೀಂದ್ರ ಸಲಹು ।। ಪಲ್ಲವಿ ।।


ಅತುಳ ತತ್ತ್ವಾರ್ಥ ಗೋಪ್ರ-

ತತಿ ಸಂಪೂರ್ಣ । ದು ।

ರ್ಮತಿ ಮಾಯಿಮತ 

ತಮ ವಿಷದಗುಣ ।

ಸತತ ವಿದ್ವತ್ ಕುಮುದ 

ಪ್ರತಿಪಾಲಕನೆ । ಕರುಣಾ ।

ಮೃತ ಭರಿತ ವದನ ಖ-

ಚಿತ ಯಶೋಭರಣ ।। ಚರಣ ।।


ಸುಜ್ಞಾನ ಸುರಭಿಯುತ 

ಅಜ್ಞ ಜಂಭಾರಿ ಛಳಿ । ವೈ ।

ರಾಗ್ಯ ಭಕುತ್ಯಾದಿ 

ವಸು ಭಾಗ್ಯಶಾಲಿ ।

ಯಜ್ಞೇನ ಶುಕನ ಮತ-

ವಜ್ಞನ ದಂಭೋಳಿ ।

ವಾಗ್ರತ್ನಮಾಲಿ ಮುನಿವರ್ಗ 

ಶುಭ ಮೌಳಿ ।। ಚರಣ ।।


ಧೀರ ಯೋಗೀ೦ದ್ರಕರ  

ವಾರಿಜೋದ್ಭವ ಯೋಗಿ ।

ಸೂರೀ೦ದ್ರ ಭವಕಲ್ಪ-

ಭೂರುಹ ಸುತ್ಯಾಗಿ ।   

ಧಾರುಣಿಗೆ ಪ್ರಸನ್ವೆಂಕಟ 

ಮೂಲರಾಮ ಪ್ರಿಯವಾಗಿ ।

ಈರ ಮತ ಸ್ಥಾಪಿಸಿದೆ 

ಮೀರಿ ಚೆನ್ನಾಗಿ ।। ಚರಣ ।।

******


by ಪ್ರಸನ್ನವೆಂಕಟದಾಸರು
ಸಲಹು ಸುಖತೀರ್ಥಮತ ಜಲಧಿಚಂದ್ರನಳಿನೀಶಾರ್ಚಕ ಇಂದ್ರ ಇಳೆಗೆ ಸುಮುನೀಂದ್ರ ಮತೀಂ ಸಲಹು ಪ.

ಅತುಳತತ್ವಾರ್ಥ ಗೋಪ್ರತತಿ ಸಂಪೂರ್ಣ ದುರ್ಮತಿ ಮಾಯಿಮತತಮ ವಿಶದಗುಣಸತತ ವಿದ್ವತಕುಮುದಪ್ರತಿಪಾಲಕನೆ ಕರುಣಾಮೃತ ಭರಿತವದನ ಖಚಿತ ಯಶೋಭರಣ 1

ಸುಜ್ಞಾನ ಸುರಭಿಯುತ ಅಜÕಜಂಭಾರಿಭಳಿ ವೈರಾಗ್ಯ ಭಕುತ್ಯಾದಿ ವಸುಭಾಗ್ಯಶಾಲಿಯಜೆÕೀನ ? ಶುಕನ ಮತವಜÕನ ದಂಭೋಳಿವಾಗ್ರತ್ನಮಾಲಿ ಮುನಿವರ್ಗಶುಭಮೌಳಿ2

ಧೀರ ಯೋಗೀಂದ್ರಕರವಾರಿಜೋದ್ಭವಯೋಗಿಸೂರೀಂದ್ರ ಭವಕಲ್ಪಭೂರುಹ ಸುತ್ಯಾಗಿಧಾರುಣಿಗೆ ಪ್ರಸನ್ನವೆಂಕಟ ರಾಮ ಪ್ರಿಯವಾಗಿಈರಮತ ಸ್ಥಾಪಿಸಿದೆ ಮೀರಿ ಚೆನ್ನಾಗಿ 3
******