Showing posts with label ಕರುಣದಿ ಕೊಡು ವರವ ಗುರು ಮಹಾದೇವ shyamasundara. Show all posts
Showing posts with label ಕರುಣದಿ ಕೊಡು ವರವ ಗುರು ಮಹಾದೇವ shyamasundara. Show all posts

Saturday, 1 May 2021

ಕರುಣದಿ ಕೊಡು ವರವ ಗುರು ಮಹಾದೇವ ankita shyamasundara

 ರಾಗ : ಪೀಲು   ತಾಳ : ದೀಪಚಂದಿ


ಕರುಣದಿ ಕೊಡು ವರವ ।

ಗುರು ಮಹಾದೇವ ।। ಪಲ್ಲವಿ ।।


ನಿರುತ ಸ್ಮರಿಸುವ ।

ಶರಣ ಸಂಜೀವ ।

ಪರಿಪಾಲಿಸನುದಿನ ।।

ಹರಿ ಕುಮಾರನ ।

ಗರ್ವವನದಾವ -

ಮಹಾನುಭಾವ ।। ಅ ಪ ।।


ಸ್ಫಟಿಕ ಸನ್ನಿಭ ಧವಳ ಶುಭಗಾತ್ರ ।

ಕುಟಿಲ ದಾನವ ಕಟಕ

ವಂಚಕ ಯಕ್ಷಪತಿ ಮಿತ್ರ ।

ಚಟುಲ ವಿಕ್ರಮ

ಸುಗಮದಯ ಧೂರ್ಜಟಿಯೆ

ಸುಚರಿತ್ರ ।

ಹೇ ನಿಟಿಲ ನೇತ್ರ ।। ಚರಣ ।।


ಆದ್ರಿ ವೈರಿಯ ತನಯ-

ನೊಡನೆ ಯುದ್ಧಗೈದಾತ ।

ಭದ್ರದಾಯಕ ರುದ್ರದೇವ

ಪ್ರಸಿದ್ಧ ಮುನಿ ನಮಿತ ।

ಸ್ವರ್ದುನೀಧರ ದದ್ದಲಾಪುರಸದ್ಮ

ಸುಖದಾತ ಹೇ ಸದ್ಯೋಜಾತ ।। ಚರಣ ।।


ಶ್ಯಾಮಸುಂದರ ಸ್ವಾಮಿ

ಪ್ರಿಯ ಸಖ ಸೋಮಶೇಖರನೆ ।

ಪ್ರೇಮದಿಂದಲಿ ರಕ್ಷಿಸೆನ್ನನು

ಭೂಮಿಸ್ಯಂದನನೇ ।

ಕಾಮಿತಪ್ರದ ವಾಮದೇವನೇ

ಹೇಮವತಿಧವನೇ

ನಿಸ್ಸೀಮ ಮಹಿಮನೆ ।। ಚರಣ ।।

*****