..
ಬಾರೊ ರಂಗ ಕೋಮಲಾಂಗ ದಾರಿಗೆ ತನ್ನಂಗಸಂಗ
ನೀಡಲ್ಹೋದ ಎನ್ನ ಕಂಗಳಿಂದ ನೋಡದೆ 1
ಉಂಗುರಗುರುಳ ಚೆಲ್ವೆ ಉದಯಭಾಸ್ಕರನಂತಿದ್ದ
ಜಾಂಬವಂತಿಯೇರ್ಹಂಬಲಿಸುತ್ಹೋದನೆ ಸಖಿಯೆ 2
ರಂಗುತುಟಿ ರಜತದಾಭರಣ ಕುಂದಣದಂತಿರುವೋ ಕೋಮಲೆ
ಇಂದು ನಾ ಕರೆತಾವೇನಮ್ಮ ಸುಂದರಾಂಗನ 3
ವೇಳ್ಯಮಾಡಿದೆನ್ನರಮಣ ಕಾಳಾದೇವಿ ಮನೆಯಲವಳ
ತೋಳ ಪಿಡಿದು ಸೆಳೆಮಂಚದಲ್ಲಿ ಕುಳಿತಿಹನೆ 4
ಏಳು ಏಳೆಂದೆಬ್ಬಿಸುತಲಿ ಈರೇಳು ಲೋಕದೊಡೆಯನ
ನಾಳೆ ನಾ ಕರೆತಾವೇನಮ್ಮ ನಾರದಪ್ರಿಯನ 5
ಅಮ್ಮನಾ ಸ್ಮರಿಸಲ್ಲಾ ್ಹ್ಯಗೆ ಪನ್ನಂಗಶಯನ ನೀಲ
ರನ್ನಮಂಚದಲ್ಲಿ ಲೆತ್ತವನ್ನಾಡಹೋದ 6
ಅನ್ನವನು ಬಿಟ್ಟು ಭಾಮೆ ತನ್ನ ಪ್ರಾಣ ತೊರೆವೋಳೆಂದು
ಮನ್ನಿಸಿ ಕರೆತಾವೇನಮ್ಮ ನಿನ್ನಾಳುವೋನ 7
ಮುದ್ದು ಮುಖವನು ನೋಡುತಿದ್ದನಾಕೆ ಮಂದಿರದಲ್ಲಿ
ಮದ್ದು ಮಾಡ್ವೊಲಿಸಿದ್ದಾಳೇನಾ ಭದ್ರಾ ಕೃಷ್ಣಗೆ 8
ಸದ್ಯೋಜಾತನಯ್ಯನಯ್ಯ ಕದ್ರುಕುಮಾರನ ಶಯ್ಯ-
ನ್ನ ್ಹದ್ದೇರಿಸಿ ಕರೆತಾವೇನಮ್ಮ ಪದ್ಮನಾಭನ 9
ಅತ್ಯಂತ ಪ್ರೀತಿ ಮೋಹದ ಮಿತ್ರವಂತೆ ಮಂದಿರದಲ್ಲಿ
ವತೆÀ್ತಯಿಟ್ಟಂತಾಯಿತಮ್ಮ ವಾಮಾಂಗಿ ಹರಿಯ 10
ಸತ್ಯವಾಗಿ ಕೇಳೇ ಭಾಮೆ ಹೆತ್ತ ತಾಯಿ ತಂದೆಯರಾಣೆ
ಹಸ್ತ ಮುಗಿದು ಕರೆತಾವೇನರ್ಕಕೋಟಿತೇಜನ 11
ಪಚ್ಚೆಪದಕ ರತ್ನದಾಭರಣ ಅಚ್ಚಮುತ್ತಿನಂತಿರುವೊಳ್ವೊಯ್ಯಾರಿ
ಮೆಚ್ಚು ಮಾಡೊಲಿಸಿದ್ದಾಳೇನೊ ಲಕ್ಷಣಾ ಹರಿಯ 12
ರಕ್ಷಿಸ್ಹರಿ ರಕ್ಷಿಸೆಂದು ಇಕ್ಷು ಬಿಲ್ಲನಯ್ಯನ ಕರೆತಂದು
ಈ ಕ್ಷಣದಲ್ಲಿ ಕೂಡಿಸುವೆ ಇಂದಿರಾಪತಿಯ 13
ಚೆಲ್ವೆರುಕ್ಮಿಣಿ ಮಂದಿರದಲ್ಲಿ ಮಲ್ಲಿಗೆ ಮಂಚದಲ್ಲೆಚ್ಚರಿ-
ಲ್ಲದ್ಹಾಗೆ ಕುಳಿತಿದ್ದ ಬರುವೋನಿಲ್ಲಿಗಿನ್ನಾ ್ಹ್ಯಗೆ14
ಪಲ್ಲವಪಾದಗಳಿಂದ ನಿಲ್ಲದೆ ಭೀಮೇಶಕೃಷ್ಣ
ಇಲ್ಲಿಗೆ ಬಂದಿರುವ ನೋಡೆ ಫುಲ್ಲನಯ್ಯನು 15
***