ankita ಶರಧಿಪುರೇಶ/ವಾರಿಧೀಶ
ರಾಗ: [ಸಾರಂಗ] ತಾಳ: [ಆದಿ]
ಬರಿಯ ಒಣ ಮಾತಲ್ಲವಿದು ಶುದ್ಧಸಾಧನ
ಗುರುಸಾರ್ವಭೌಮನ ದಿವ್ಯ ತಪೋಧನ ಪ
ಕಾರ್ಯಕಿಳಿಯುವ ನವ್ಯ ಪರಿಮಳ ಬೋಧನ
ನೂತನಕತಿನೂತನ ಕೃಪೆ ಗುರುದೇವನ 1
ಅತಿ ಪತಿತರನುಗೈವುದು ಪಾವನ
ಗತಜೀವಿಗಳಿಗೀವುದು ನವ ಚೇತನ 2
ತಾತ ಶರಧಿಪುರೇಶನ ಮಾತೆಲ್ಲಗೀತರತುನ
ಸಾರ್ಥಖ್ಯಗೊಳಿಪುದು ಸಾಧಕರ ಜೀವನ 3
***