..
kruti by ವೀರನಾರಾಯಣ Veeranarayana
ಪುರಂದರದಾಸರು
ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ
ನಿಪುಣಮತಿ ಪುರಂದರ ದಾಸಮಲ್ಲ ಅ.ಪ.
ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1
ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2
ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
***