..
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ
ಅಂಬುಜ ಸಂಭವ ಶಂಭು ವಿನುತ ಮನ |
ದ್ಹಂಬಲವನು ಸಲಿಸೆಂದು ನಿರುತ ನೆರೆ ಪ
ತಾವರೆದಳನಯನಾ ಭವಹರಣ
ತವಕದಿ ಸುಜ್ಞಾನವಗರೆಯೋ 1
ತಂದೆ ನಾ ಜನಿಸುತ ಭೂಸುರ ಜನ್ಮದಿ
ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್
ಮಂದರ ಸಂಗದಿ ಕೊಂದಿದೆ ನಿನ್ನನು
ನೊಂದೆನೋ ಕರುಣಿಸು 2
ಹೇಸಿ ಸಂಸಾರದ ಪಾಶÀವ ಬಿಡಿಸುತ
ಶ್ರೀಶಾಮಸುಂದರವಿಠಲನೆ
ದೋಷವ ನೋಡದೆ | ಪೋಷಿಸು ಮರೆಯದಲೆ
ವಾಸುಕಿಶಯನನೆ 3
***