Showing posts with label ನಮಿಸುವೆನು ಭುವನೇಂದ್ರ ಗುರುರಾಯ jagannatha vittala NAMISUVENU BHUVANENDRA GURURAYA BHUVANENDRA TEERTHA STUTIH. Show all posts
Showing posts with label ನಮಿಸುವೆನು ಭುವನೇಂದ್ರ ಗುರುರಾಯ jagannatha vittala NAMISUVENU BHUVANENDRA GURURAYA BHUVANENDRA TEERTHA STUTIH. Show all posts

Saturday 1 May 2021

ನಮಿಸುವೆನು ಭುವನೇಂದ್ರ ಗುರುರಾಯ ankita jagannatha vittala NAMISUVENU BHUVANENDRA GURURAYA BHUVANENDRA TEERTHA STUTIH

Audio by Vidwan Sumukh Moudgalya


 ಶ್ರೀ ಜಗನ್ನಾಥದಾಸರು ಶ್ರೀ ಭುವನೇಂದ್ರತೀರ್ಥರನ್ನು ಕುರಿತು ಮಾಡಿರುವ ಕೃತಿ


 ರಾಗ : ರೀತಿಗೌಳ    ಆದಿತಾಳ


ನಮಿಸುವೆನು ಭುವನೇಂದ್ರ ಗುರುರಾಯರಾ 

ಅಮಿತ ಮಹಿಮೆಗೆ ಅಹೋರಾತ್ರಿಯಲಿ ಬಿಡದೆ ॥ಪ॥


ಸಿದ್ಧಾರ್ಥಿನಾಮ ಸಂವತ್ಸರದ ವೈಶಾಖ

ಶುದ್ಧೇತರ ಸುಪಕ್ಷ ಸಪ್ತಮಿಯಲಿ

ವಿದ್ವತ್ಸಭಾ ಮಧ್ಯದಲಿ ರಾಮ ವ್ಯಾಸರ ಪ-

ದ ದ್ವಯವನೈದಿದ ಮಹಾಮಹಿಮರನು ಕಂಡು ॥೧॥


ರಾಜವಳ್ಳಿಯೆಂಬ ಪುರದಿ ಕರುಣದಿ ಪರಿ

ವ್ರಾಜಕಾಚಾರ್ಯವರ ತನ್ನ ಪಾದಾ

ರಾಜೀವಯುಗಳ ಧೇನಿಸುತ್ತಿಪ್ಪರಿಗೆ ಕಲ್ಪ

ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ ॥೨॥


ಶ್ರೀ ತುಂಗಭದ್ರಾ ತರಂಗಿಣಿ ತೀರದಲಿ

ವಾತಾತ್ಮಜನ ಪಾದ ಮೂಲದಲ್ಲೀ

ಪ್ರೀತಿಪೂರ್ವಕವಾಗಿ ವಾಸವಾದರು 

 ಜಗನ್ನಾಥವಿಠ್ಠಲನ ಕಾರುಣ್ಯ ಪಾತ್ರರ ಕಂಡು ॥೩॥

***


namisuvenu BuvanEndra gururAyara

amita mahimage ahOrAtriyali biDade ||pa||


siddhArdhi nAma saMvatsarada vaiSAKa

SuddhEtara pakSha saptamiyali

vidvatsaBA madhyadali rAmavyAsara

padadvayavanaidida mahAmahimarana kanDu ||1||


rAjavaLLi eMba puradi karuNadi pAri

vrAjakAcArya varavataMsa pAda

rAjIvayugaLa dhEnisutipparige kalpa

BUjadaMdadi bEDidiShTArtha koDuvarige ||2||


SrI tunga BadrA taraMgiNI tIradali

vAtAtmajana pAda mUladalli

prIti pUrvakavAgi vAsavAdaru jaga

nnAtha viThalana kAruNyapAtrara kanDu ||3||

***

ನಮಿಸುವೆನು ಭುವನೇಂದ್ರ ಗುರುರಾಯರ

ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ ||pa||


ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ

ಶುದ್ಧೇತರ ಪಕ್ಷ ಸಪ್ತಮಿಯಲಿ

ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ

ಪದದ್ವಯವನೈದಿದ ಮಹಾಮಹಿಮರನ ಕಂಡು ||1||


ರಾಜವಳ್ಳಿ ಎಂಬ ಪುರದಿ ಕರುಣದಿ ಪಾರಿ

ವ್ರಾಜಕಾಚಾರ್ಯ ವರವತಂಸ ಪಾದ

ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ

ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ ||2||


ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ

ವಾತಾತ್ಮಜನ ಪಾದ ಮೂಲದಲ್ಲಿ

ಪ್ರೀತಿ ಪೂರ್ವಕವಾಗಿ ವಾಸವಾದರು ಜಗ

ನ್ನಾಥ ವಿಠಲನ ಕಾರುಣ್ಯಪಾತ್ರರ ಕಂಡು ||3||

***


ಭೂದೇವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ।

ಭೂತಲೇ ಸಾಧುವಿಖ್ಯಾತಂ ಭುವನೇಂದ್ರ ಗುರುಂ ಭಜೇ॥

***