Showing posts with label ಏಳು ಆರೋಗಣೆಗೆ ಯಾಕೆ ತಡವೊ ankita gopala vittala ELU AAROGANEGE YAAKE TADAVO. Show all posts
Showing posts with label ಏಳು ಆರೋಗಣೆಗೆ ಯಾಕೆ ತಡವೊ ankita gopala vittala ELU AAROGANEGE YAAKE TADAVO. Show all posts

Thursday, 12 December 2019

ಏಳು ಆರೋಗಣೆಗೆ ಯಾಕೆ ತಡವೊ ankita gopala vittala ELU AAROGANEGE YAAKE TADAVO



Audio by Mrs. Nandini Sripad

ಶ್ರೀ ಗೋಪಾಲದಾಸರ ಕೃತಿ 

 ರಾಗ ಭೌಳಿ         ಖಂಡಛಾಪುತಾಳ 

ಏಳು ಆರೋಗಣೆಗೆ ಯಾಕೆ ತಡವೊ ।
ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥

ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।
ಮಣಿ ಹಾಕಿ ಮುತ್ತಿನ ಶೆಮ್ಯಗಳಿಟ್ಟು ॥
ಮುಡಿಸಿ ದೀಪಗಳ್ಹಚ್ಚಿ ಉದಕ ರಂಗೋಲಿ ಹಾಕಿ ।
ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 1 ॥

ಪುಡಿ ಉಪ್ಪು ಚಟ್ನಿ ಕೋಸಂಬರಿ ಉಪ್ಪಿನಕಾಯಿ ।
ಪಡವಲಕಾಯಿ ಚೆವಳಿ ಕಾಯಿಯು ॥
ಅಡವಿಗುಳ್ಳದ ಪಳಿದ್ಯ ಆಂಬೊಡೆ ಫೇಣಿಯು ।
ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 2 ॥

ಎಣ್ಣೂರಿಗತಿರಸವು ಸಣ್ಣ ಶ್ಯಾವಿಗೆ ಫೇಣಿ ।
ಬೆಣ್ಣೆದೋಸೆ ಹುಗ್ಗಿ ಅನ್ನದಧ್ಯಾನ್ನ ತೀ ॥
ರ್ಥಾನ್ನಗಳನು ಕಾಯಿ ಹಾಲು ಬಡಿಸಲು ।
ಬಣ್ಣಿಸಿ ಶ್ರೀದೇವಿ ಬಂದು ನಿಂತಿಹಳು ॥ 3 ॥

ಗಂಧ ಕಸ್ತೂರಿ ಪುನುಗು ಕರ್ಪೂರದ ವೀಳ್ಯ ।
ಚೆಂದಾಗಿ ಮಡಿಸಿ ಕೈಲಿ ಹಿಡಿದುಕೊಂಡು ॥
ದುಂಡು ಮಲ್ಲಿಗೆ ಹೂವ ಅಂದವಾಗಿ ಕಟ್ಟಿ ।
ರಂಭೆ ಜಾನಕಿದೇವಿ ಹಿಡಿದು ನಿಂತಿಹಳು ॥ 4 ॥

ನಿತ್ಯ ತೃಪ್ತನೆ ನಿನ್ನ ಉದರದೊಳಿಹ ।
ಉತ್ತಮ ಪುರುಷನೆ ಉಣಲು ಏಳು ॥
ಮುಕ್ತಿದಾಯಕ ನಮ್ಮ ಗೋಪಾಲವಿಠ್ಠಲ ।
ಭಕ್ತರ ಬಿನ್ನಪವ ನೀ ಕೇಳಿ ಬಾರೋ ॥ 5 ॥
********