yes
ಮಾರಣಕಟ್ಟೆಯ ಬ್ರಹ್ಮಲಿಂಗೇಶ
ಬೆಳಗಾಯಿತು ಏಳಯ್ಯ ಶ್ರೀ ಭೂತೇಶ...ಅ..ಹಃ ll 2 ll
ಬೆಳಗಾಯಿತು ಏಳಯ್ಯ ಶ್ರೀ ಭೂತೇಶ...ಅ..ಹಃ ll 2 ll
ಪೃಥ್ವಿ ಪೂರ್ವದಲ್ಲಿ ಸೂರ್ಯನು ಆಗಮಿಸಿ,
ಸ್ವರ್ಣಕಾಂತಿ ಬೀರುತ್ತಾ ನಿನಗೆ ಕಾದಿಹನು ll 2 ll
ಬಾನಲ್ಲಿ ಪಕ್ಷಿಗಳ ಇಂಚರ ಸಂಚರಿಸಿ
ಮಧುರ ಸುಮಧುರ ಗಾನವು ಹೊಮ್ಮಿಹುದು...
ಭುವಿಗೆ ಬೆಳಕಾಯಿತು...
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
Il ಮಾರಣಕಟ್ಟೆಯ ll
Il ಬೆಳಗಾಯಿತು ll
ಮಂದಾರ ಸುಮಾರಾಲ್ಲಿ ಹಿಮದಲ್ಲಿ ಮಿಂದು
ನಿನ್ನನ್ನು ಸಿಂಗರಿಸಿ ಚಂದದಿ ಕಾದಿಹುದು ll 2 ll
ಕಣ್ಣುತ್ತೆರೆದು ನೋಡು ಹೇ ಕರುಣಾಳು
ಕತ್ತಲ ಬಾಳನು ಬೆಳಗಳು ಎದ್ದೇಳು..
ಕತ್ತಲ ಬಾಳನು ಬೆಳಗಳು ಎದ್ದೇಳು..
ಭುವಿಗೆ ಬೆಳಕಾಯಿತು...
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
Il ಮಾರಣಕಟ್ಟೆಯ ll
Il ಬೆಳಗಾಯಿತು ll
ಬ್ರಹ್ಮ ಕುಂಡದ ನೀರು ಅಭಿಷೇಕಕ್ಕೆ ಕಾದುಹಿದು,
ಬ್ರಾಹ್ಮಣ ವೃಂದವೆಲ್ಲಾ ವೇದ ಘೋಷ ಗೈದಿಹುದು ll 2 ll
ಭಕುತ ಜನರೆಲ್ಲಾ ದರುಶನಕ್ಕೆ ಬಂದಿಹರು
ಭಕ್ತ ಗ್ರೇಸರನೇ ಎದ್ದು ನೀ ಕೃಪೆ ತೋರು..
ಭುವಿಗೆ ಬೆಳಕಾಯಿತು...
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
ಏಳು ಬೆಳಗಾಯಿತು...ಬ್ರಹ್ಮಲಿಂಗೇಶ್ವರ..
Il ಮಾರಣಕಟ್ಟೆಯ ll 2 ll
Il ಬೆಳಗಾಯಿತು ll 2 ll
*****