Showing posts with label ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ gurumahipati. Show all posts
Showing posts with label ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ gurumahipati. Show all posts

Wednesday, 1 September 2021

ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ ಪ 


ಭವದ ಭಯ ಭಂಗಂಗೆ ಸರ್ವಾತರಂಗಗೆ ರವಿಕೋಟಿ ಭಾಗಂಗೆ ಸುರತುಂಗಗೆ ತವಕದಿ ಅನಂಗಗ ಪಡೆದಯಮಂಗಗ ಅವನಿರಿಸಿಸಂಗಗ ಶ್ರೀರಂಗಗ 1 

ಮಾಯಾ ಅತೀತಗ ಅನಾಥನಾಥಗ ದಯಭರಿತಗ ಅನುಪಮಚರಿತಗ ಅಜನದ್ವೈತಗ ರಣತನಿರ್ಭರಿತಗ ಅವಧೂತಗ 2 

ವಿಹಗ ಧ್ವಜ ಛಂದಗ ದೇವಕಿಯ ಕಂದಗ ಮಹಾನಿಗಮ ತಂದಗ ಮುಕುಂದಗ ಮಹಿಪತಿ ನಂದನು ಪಾಲಿಪಾನಂದಗ ಇಹಪರಾವಂದ್ಯಗ ಗೋವಿಂದಗ 3

***