Showing posts with label ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ vijaya vittala. Show all posts
Showing posts with label ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ vijaya vittala. Show all posts

Wednesday, 16 October 2019

ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ankita vijaya vittala

ವಿಜಯದಾಸ
ಪುಣ್ಯ ದೊರಕುವುದು ಅನು
ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ

ಬಡತನವಿದ್ದರು ನೆರೆಹೊರೆ ಮನೆಯಲ್ಲಿ
ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ
ಬಿಡದೆ ಮಾಡುವ ಗೃಹಕೃತ್ಯಂಗಳು ಜಗ
ಅನುದಿನ 1

ವಿಪರೀತ ಕಾಲಗಳಟ್ಟಿದ ಕಾಲಕ್ಕು
ಸ್ವಪನಾದಿಯಪ ಕಳವಳಿಸದಲೇ
ಪತಿ ಸೇವೆ
ಅಫಲದಲ್ಲಿ ಮಾಡಿ ಒಲಿದೊಲಿದಾಡುವ2

ಲಾವಣ್ಯ ಪುರುಷರ ಕಂಡರು ಮನದಲ್ಲಿ
ಭಾವಿಸಬೇಕು ಸಹೋದರರು ಎಂದು
ವಿಭೂತಿ ರೂಪವ
ನಿತ್ಯ 3

ಬಂದು ತಂದರೆ ಸಾವಿರ ಮಾಡಿ ಚಿಂತಿಸಿ
ಇಂದಿರೇಶನೆ ಪತಿರೂಪವೆಂದು
ಅಂದದದಲಿದ್ದ ವಿಭವಾನುಸಾರ ಆ
ನಂದವಾಗಿ ಸಂಸಾರದೊಳಗಿರೆ 4

ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ
ಹಿತವಂತಳಾಗಿ ನುಡಿಸಿಕೊಳುತಾ
ಗಾತ್ರ ಸರ್ವದಾ
ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5

ಚಕೋರ ಚಂದ್ರಮನಲ್ಲಿ ಮನಸು ಇಟ್ಟು
ಸುಖಬಡುವಂತೆ ನಾನಾ ಪ್ರಕಾರ
ಕಕುಲಾತಿಯಿಂದ ಕಾಮುಕಳಾಗದೆ ಮಹಾ
ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6

ಸಂತಜನರೆಂಬ ಕ್ಷೀರಾಂಬುಧಿ ಮಧ್ಯ
ಸಂತತ ಮೀನಿನಂದದಿ ಬೀಳುತಾ
ಪತಿ ಧರ್ಮವಹಿಸಿ ಶ್ರೀ
ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7

ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ
ಪ್ರೇಮದಿಂದಲಿ ಗುಣಗಳ ಗುಣಿಸೀ
ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ
ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8

ಆವಾವ ಪ್ರಯೋಜನ ಮಾಡಲು ಸರ್ವದ
ದೇವದೇವೇಶನಾಧೀನವೆಂದೂ
ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು
ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
**********