ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ ಪ
ಕಣ್ಣಿನೊಳದೆ ನಿಜ ವಸ್ತದ ಖೂನ ಪುಣ್ಯವಂತನೆ ಬಲ್ಲನುಸಂಧಾನ ಧನ್ಯಗೈಸುವದನುಭವದ ಖೂನ ತನ್ನೊಳಗದೆ ಗುರು ಆತ್ಮಙÁ್ಞನ 1
ಕಣ್ಣಿನ ಹಿಂದಾಡುತಲದೆ ಮನ ಕಣ್ಣಿಗೆ ಕಣ್ಣು ನೋಡಲುನ್ಮನ ಕಣ್ಣಿನೊಳಾಡುತಲದೆ ಚಿದ್ಛನ ಅಣುರೇಣುಕ ತಾ ಇದೆ ಪರಿಪೂರ್ಣ 2
ಕಣ್ಣಿನೊಳಾಡುವ ಭಾಸ್ಕರ ಕರುಣ ಭಿನ್ನವಿಲ್ಲದೆ ಚೆನ್ನಾಗ್ಯನುದಿನ ಚಿನ್ನ ಮಹಿಪತಿಗೆ ನೋಡೇವ ಧ್ಯಾನ ಧನ್ಯಗೈಸುವ ತಾ ದೀನೋದ್ಧರಣ 3
***