Wednesday, 1 September 2021

ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ  ಪ


ಕಣ್ಣಿನೊಳದೆ ನಿಜ ವಸ್ತದ ಖೂನ ಪುಣ್ಯವಂತನೆ ಬಲ್ಲನುಸಂಧಾನ ಧನ್ಯಗೈಸುವದನುಭವದ ಖೂನ ತನ್ನೊಳಗದೆ ಗುರು ಆತ್ಮಙÁ್ಞನ 1 

ಕಣ್ಣಿನ ಹಿಂದಾಡುತಲದೆ ಮನ ಕಣ್ಣಿಗೆ ಕಣ್ಣು ನೋಡಲುನ್ಮನ ಕಣ್ಣಿನೊಳಾಡುತಲದೆ ಚಿದ್ಛನ ಅಣುರೇಣುಕ ತಾ ಇದೆ ಪರಿಪೂರ್ಣ 2 

ಕಣ್ಣಿನೊಳಾಡುವ ಭಾಸ್ಕರ ಕರುಣ ಭಿನ್ನವಿಲ್ಲದೆ ಚೆನ್ನಾಗ್ಯನುದಿನ ಚಿನ್ನ ಮಹಿಪತಿಗೆ ನೋಡೇವ ಧ್ಯಾನ ಧನ್ಯಗೈಸುವ ತಾ ದೀನೋದ್ಧರಣ 3

***


No comments:

Post a Comment