Showing posts with label ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ ಬ್ರಹ್ಮಾನಂದ mahipati. Show all posts
Showing posts with label ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ ಬ್ರಹ್ಮಾನಂದ mahipati. Show all posts

Wednesday, 1 September 2021

ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ ಬ್ರಹ್ಮಾನಂದ ankita mahipati

 ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ ಬ್ರಹ್ಮಾನಂದ ವಸ್ತು ನೀನೆ ಸಮಸ್ತ ಜನಪ್ರಿಯ pa


ಮೊರೆಯನಿಟ್ಟ ಧ್ರುವಗೆ ನೀನು ಕೊಟ್ಟ್ಯೋ ಪದ ಆಢಳ ಕರಿಯ ಮೊರೆಯ ಕೇಳಿ ನೀನು ಸೆರಿಯ ಬಿಡಿಸಿದ್ಯೊ ದಯಾಳು ಶರಣು ಹೊಕ್ಕ ತರಳಗಿನ್ನು ಪಡದ್ಯೊ ಪ್ರಾಣ ನಿಶ್ಚಳ ಸ್ಮರಣೆಗೊದಗಿ ಬಂದ್ಯೊ ಪಾಂಡವರಿಗೆ ತಾತ್ಕಾಳ 1 

ಮೊರೆಯನಿಟ್ಟ ದ್ರೌಪದಿಗೆ ವಸ್ತ್ರ ಪೂರಿಸಿದ್ಯೊ ಪೂರ್ಣ ಧರೆಯೊಳು ಶಿಲೆಯಾಗಿದ್ದ ಸತಿಗೆ ಮಾಡಿದ್ಯೊ ಉದ್ದರಣ ಪರಿ ಹೊರೆವ ಪೂರ್ಣ ಭಕ್ತರ ಪ್ರಾಣ ವರ್ಣಿಸಲಾಗದೊ ನಿಮ್ಮ ದಯವೃತ್ತಿ ನಿಜಗುಣ 2 

ವಾಸುದೇವ ನಿಶ್ಚಯ ಭಾಸ್ಕರ ಕೋಟಿ ತೇಜ ಭಾಸುತಿಹ ನಿಮ್ಮ ದಯ ಲೇಸಾಗಿ ಪಾಲಿಸೊ ಪೂರ್ಣ ದಾಸ ಮಹಿಪತಿಯ ವಿಶ್ವದೊಳಾನಂದದಿಂದ ರಕ್ಷಿಸುವ ನಿಮ್ಮ ಭಯ 3

***