Showing posts with label ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ krishnavittala satyadhyana teertha stutih. Show all posts
Showing posts with label ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ krishnavittala satyadhyana teertha stutih. Show all posts

Monday 2 August 2021

ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ ankita krishnavittala satyadhyana teertha stutih

ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ

ಪ್ರೇಷ್ಠತಮ ನೀ ನೊಲಿದ ಬಗೆಯೇನೋ ರಾಮಾ ಪ


ಪಟ್ಟ ಪುತ್ರನ ಶ್ರೇಷ್ಠ ಪೀಠದಲಿ ಕುಳಿತಿಂದು

ಮುಟ್ಟಿ ಪೂಜಿಪ ಭಾಗ್ಯಗಿಟ್ಟಹುದೆ ಏನೆಂಬೆ ಅ.ಪ.


ಚಿಕ್ಕತನದಲೆ ನೂಕಿ ವಿಷಯ ವಿದ್ಯೆಗಳನ್ನು

ಚೊಕ್ಕ ಶಾಸ್ತ್ರಗಳಲ್ಲಿ ಇಕ್ಕಿ ದಾಸರ ಮನವಲಿದ್ಯೋ

ಕಕ್ಕಸವುಭವವೆಂದು ವೈರಾಗ್ಯ ಧರಿಸುತಲಿ

ಭಕ್ತಿ ಮಾಳ್ಪುದ ನೋಡಿ ಮುಕ್ತರಾಶ್ರಯ ವಲಿದ್ಯೋ 1


ದಾನಶೂರರು ಬಹು ನಿದಾನ ವಂತರು ಹಾಗೆ

ಮಾನ ಸಾಗರರೆಂದು e್ಞÁನಿ ಪ್ರಾಪ್ತನೆ ವಲಿದ್ಯೋ

ದೀನ ಜನ ಮಂದಾರ ಮಾನ್ಯ ಮುನಿಕುಲ ತಿಲಕ

ಶೂನ್ಯವಾದಧ್ವಾಂತ ಭಾನು ವೆಂದೊಲಿದ್ಯೋ 2


ಮೋದವಿತ್ತರು ಸತ್ಯಧ್ಯಾನ ತೀರ್ಥರು ಹಿಂದೆ

ಸಾಧಿಸುತ ಸುಖಮತದ ಜಯ ಭೇರಿ ಜಗದೀ

ಸಾಧು ಜನರ e್ಞÁನ ಖೇದವಳಿಯುತ ಪ್ರಮೋದ

ವೀಯುವರೀಗೆ ಸಿದ್ದವೆಂದೊಲಿದ್ಯೋ 3


ಹಿಂದಿ ನ್ಹಿರಿಯರ ವಲವೊ ಮಂದಿ ಪುಣ್ಯವೊ ಮತ್ತೆ

ತಂದೆ ಕರುಣವೊ ಕಾಣೆ ಬಂದುದೀ ಪೀಠದಲಿ

ನಂದ ಮುನಿ ವಿಧಿ ವಿನುತ ರಾಮ ನಿನ್ನೊಲಸಿಹ ಪ್ರ

ಮೋದ ತೀರ್ಥರುಸತ್ಯ ಪಾಮರರಿಗಾಗುವುದೆ ಸ್ತುತಿಸೆ 4


ಸಾಧು ಸಜ್ಜನ ಪ್ರಾಪ್ಯ ಬಾದರಾಯಣ ಶರಣು

ಮೋದ ಮಯ ನಿರ್ದೋಷ ವೇದ ವೇದ್ಯನೆ ಶರಣು

ಮಾಧವ ಶ್ರೀ ಕೃಷ್ಣ ವಿಠಲರಾಯನೆ ಶರಣು

ಗಾಧವರ್ಜಿತ ಮಹಿಮ ಶ್ರೀ ರಾಮ ಶರಣು ಶರಣು 5

***