Audio by Mrs. Nandini Sripad
ಪುರಂದರದಾಸಕೃತ ಆನಂದ ಸುಳಾದಿ
ಧ್ರುವತಾಳ
ಆಪಾದವಾನಂದ ಆನಖವಾನಂದ |
ಆಜಾನು ಆಜಂಘೆ ಆನಂದಮಯವಯ್ಯ |
ಆ ಊರು ಆನಂದ ಆ ಕಟಿ ಆನಂದ |
ಆ ನಾಭಿ ಆ ಕುಕ್ಷಿ ಆನಂದಮಯವಯ್ಯ |
ಆ ಉರ ಆನಂದ ಆ ಭುಜವಾನಂದ |
ಆ ಕಂಬುಗ್ರೀವ-ಮುಖ ಆನಂದಮಯವಯ್ಯ |
ಆ ಶಿರೋರುಹಗಳು ಆನಂದಮಯವಯ್ಯ |
ಅಸಂಖ್ಯ ಆನಾಮದ ಪುರಂದರವಿಠಲ ॥ 1 ॥
ಮಟ್ಟತಾಳ
ಪಾವಕ-ಕೋಟಿ ಸೂರ್ಯರ ಪ್ರಭೆಯ ಸೋಲಿಸುವ |
ದೇವನಂಗಕಾಂತಿ ಆನಂದಮಯವಯ್ಯ |
ದೇವರಾಟ್ ಶ್ರೀಪುರಂದರವಿಠಲ ॥2॥
ತ್ರಿಪುಟತಾಳ
ದಶಮಾತುರಗಳು ಆನಂದಮಯವಯ್ಯ |
ಹೃಷೀಕೇಶನ ಏಕಾದಶ ಹೃಷೀಕ ಆನಂದಮಯವಯ್ಯ |
ಮಹಾಭಾವ ಭೂವಿಲಾಸ ದೇವನಂಗ ಕಾಂತಿ
ಆನಂದಮಯವಯ್ಯ| |
ದೇವರಾಟ್ ಸಿರಿ ಪುರಂದರವಿಠಲ ॥3॥
ಅಟ್ಟತಾಳ
ಬೊಮ್ಮ ಬೊಮ್ಮ ಬೊಮ್ಮ ಶ್ರೀಹರಿಯ |
ಕರ್ಮವಾನಂದ ಕರಣಗಳಾನಂದ |
ಹಮ್ಮು ಆನಂದ ಹಾಸ್ಯವಾನಂದ |
ಕಂಗಳಾನಂದ ನಮ್ಮ ಪುರಂದರ ವಿಠಲರಯನ
ದಿವ್ಯ ಕೋಪವಾನಂದ ॥ 4 ॥
ಏಕತಾಳ
ಆನಂದವರ್ಧಾಂಗಿ ಆನಂದನ ಕುಮಾರ |
ಆನಂದ ಮೂರುತಿಯ ಅಗಲದೆ ಇರಿ |
ಆನಂದ ಆನಂದ ಪರಮಾನಂದ |
ಪರಮಾನಂದ ಪುರಂದರವಿಠಲ॥ 5 ॥
ಜತೆ
ಜ್ಞಾನ ವಿಜ್ಞಾನ ಸುಗಂಧ ಸುಖದೇಹ |
ಅನಂದಮಯವಯ್ಯ ಪುರಂದರವಿಠಲನ ಅವಯವಗಳೆಲ್ಲ ||
*********
by ಪ್ರಸನ್ನವೆಂಕಟದಾಸರು
ಷಡ್ವರ್ಗ ಸುಳಾದಿ
ಝಂಪೆತಾಳ
ಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರನೆನವಿನಲಿ ಜನುಮಗಳ ತಂದೀವ ಕಾಮಕನಕಗಿರಿ ಕೈಸಾರ್ದಡಂಪರಸುದೊರೆದಡಂಇನಿತು ತೃಪುತಿಯೈದದೆನ್ನ ಮನೋಕಾಮಜನಪರ ಸಿರಿಬಯಕೆ ಜಾಣೆಯರ ಸಂಗತಿಯಕನಸಿನೊಳಗಾದಡಂ ಬಿಡದಿಹುದು ಕಾಮತನಗಲ್ಲದ್ಹವಣದಿಹ ಕಾಮಕಾಮಿನಿಭೂತಕೆನಿತಶನ ಸಾಲದಾಯಿತೈ ಪೂರ್ಣಕಾಮಮುನಿನಾರಿಯಳ ಕಲ್ಲಮೈಯನೆತ್ತಿದಪಾದವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನಜ್ಞಾನ ಭಕುತಿ ವೈರಾಗ್ಯ ಕಾಮವನೀಯೊದಿನಕರಕುಲೋದ್ದಾಮ ಪ್ರಸನ್ವೆಂಕಟ ರಾಮ1
ಮಠ್ಯತಾಳ
ಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧಬರಿಯಹಂಕಾರದಿ ಬೆರತಘರಾಶಿಯನೆರಹಿಸಿ ನಿರಯವನುಣಿಸುವ ಕ್ರೋಧಮರುಳನ ದುರುಳನ ಮಾಡುವ ಕ್ರೋಧಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿಶಿರದ ಮ್ಯಾಲಿಡು ಗಡ ಗರುಡಾದಿ ಪ್ರಸನ್ವೆಂಕಟ ತಾಂಡವ ಕೃಷ್ಣ 2
ರೂಪಕತಾಳ
ಹೀನ ಧರ್ಮನ ಮಾಡಿಸುರಋಷಿಪಿತೃ ಋಣವೇನು ಕಳಿಯಲಿಲ್ಲವೆನ್ನ ಲೋಭಜೇನನೊಣನ ವೋಲು ತಾನುಣ್ಣನೊದಗಿಸಿನಾನಾಲಾಭದಲಿ ತುಂಬದು ಲೋಭಭಾಂಡದಾನವ ಬೇಡಿಳೆಯಾಜಾಂಡವನೊಡೆದಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನುನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾಮನ್ನ ಉದಾರಿಶಿಖಾಮಣಿಭಾಗ್ರ್ವಾ3
ಪಂಚಘಾತ ಮಠ್ಯಅನ್ನಕೆ ಉಬ್ಬಿ ಯೌವನ ರೂಪಕೆ ಕೊಬ್ಬಿಧÀನ್ನಕೆ ಮೊಬ್ಬೇರಿಸಿತೆನ್ನ ಮದವುಎನ್ನ ಸವಿಸುವ ಪರಿವಾರ ಭುಜಬಲೆಂಬುನ್ನತಿಯಿಂದುನ್ಮತ್ತನ ಮಾಳ್ಪ ಮದವುದಾನವೇಂದ್ರನ ಮೌಳಿಯನ್ನು ತುಳಿದ ಪದದಿಎನ್ನ ಮದರಾಜನ ಮೆಟ್ಟಿಯಾಳೆಲೆ ದೇವನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರಸನ್ವೆಂಕಟ ಉರುಕ್ರಮ ಧನ್ಯರೊಡೆಯ 4
ತ್ರಿವಿಡಿತಾಳ
ಉತ್ತಮರ ಅವಗುಣವೆಣಿಸುತಹೊತ್ತು ಯಮಪುರಕೊಯ್ವ ಮತ್ಸರಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತು ಮತ್ಸರವುಚಿತ್ತಜನ ಶರ ಮತ್ಸರಿಸುತಿರೆಮೊತ್ತ ಗೋಪೇರ ಕುಚದ ಪೀಠದಿಒತ್ತಿ ಸುಖವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ 5
ಅಟ್ಟತಾಳ
ಇಂದುಮುಖಿಯರ ಕಂಡಂದಗೆಡಿಪ ಮೋಹಕಂದಗಳಾಡಿಸಿ ಕರುಣ ಉಕ್ಕಿಪ ಮೋಹತಂದೆ ತಾಯಿ ಬಂಧುವರ್ಗದ ಮೋಹಮುಂದಣಗತಿಗೆ ಮೂರ್ಛೆಯನಿತ್ತ ಮೋಹಕಂದರ್ಪನ ಗೆದ್ದಯೋಗಿಜನರ ಹೃದಯಾಂಧಕಾರವ ಗೆದ್ದು ತವಪಾದನಖಪೂರ್ಣಚಂದ್ರ ಚಂದ್ರಿಕೆದೋರಿ ಅಭಿಜÕನ ಮಾಡೆನ್ನ ದಯಾಸಿಂಧುಪ್ರಸನ್ನವೆಂಕಟ ಮುನಿಜನವಂದ್ಯ6
ಏಕತಾಳ
ಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದಎನ್ನ ಮದವೆಂಬ ಗಜಕಂಕುಶಾಂಕಿತ ಪದಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರಸನ್ನವೆಂಕಟನ ದಿವ್ಯಪಾದಪಾಂಕಿತ
ಪದಜತೆ
ಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತು ಸಂತತ ಶ್ರೀಚರಣ ಸ್ಮರಣೆಮುಂತಾದೌಷಧವನಿತ್ತೆನ್ನ ರಕ್ಷಿಸು ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ
********