Showing posts with label ಮಾನಭಂಗವ ಮಾಡಿ ಮೇಲುಪಚಾರವ purandara vittala. Show all posts
Showing posts with label ಮಾನಭಂಗವ ಮಾಡಿ ಮೇಲುಪಚಾರವ purandara vittala. Show all posts

Friday, 6 December 2019

ಮಾನಭಂಗವ ಮಾಡಿ ಮೇಲುಪಚಾರವ purandara vittala

ಪುರಂದರದಾಸರು
ರಾಗ ಕಾಂಭೋಜ ಝಂಪೆ ತಾಳ 

ಮಾನಭಂಗವ ಮಾಡಿ ಮತ್ತೆ ಉಪಚಾರಗಳ-
ನೇನ ಮಾಡಿದರಲ್ಲಿ ಇರಬಾರದಯ್ಯ ||ಪ||

ಕುಂದುಗಳನೆತ್ತಿ ಕುಚೋದ್ಯ ಕುಮಂತ್ರಗಳ-
ನೊಂದೊಂದು ವರ್ಣಗಳನೆತ್ತಿ ಜರೆದು
ಮುಂದೆ ಭಂಗಿಸಿ ಹಿಂದೆ ಉಂಬಳಿಯ ನೀಡುವುದು
ಮುಂದಲೆಯ್ ಕೊಯ್ದು ಮುಡಿಗ್ಹುವ್ವು ಮುಡಿಸಿದಂತೆ ||

ನಗೆಗೇಡು ಮಾಡಿ ನಾಲ್ವರ ಮುಂದೆ ಮೊಗಗೆಡಿಸಿ
ಮಗುಳೆ ಬಾರೆಂದು ಮನ್ನಿಸಿ ಲಾಲಿಸಿ
ಮಿಗಿಲಾದ ವಸ್ತ್ರಗಳ ಭೂಷಣಂಗಳನೀಯೇ
ತೊಗಲ ಮೂಗ್ಹರಿದು ಚಿನ್ನದ ಮೂಗನಿತ್ತಂತೆ ||

ಅರ್ಥ ಹೋದರೆ ಪ್ರಾಣ, ಪ್ರಾಣ ಹೋದರೆ ಮಾನ
ವ್ಯರ್ಥವಾಗದ ಹಾಗೆ ಕಾಯಬೇಕು
ಕರ್ತ ಪುರಂದರವಿಠಲರಾಯನ
ಚಿತ್ತದಲಿ ನೆನೆನೆನೆದು ಸುಖಿಯಾಗಬೇಕು ||
***

pallavi

mAna bhangava mADi matte upacAragaLa nEna mADIdaralli ira bAradayya

caraNam 1

kundugaLanetti kucOdya kumantragaLa nondondu varNagaLanetti jaredu
munde bhangisi hinde umbaLiya nIDuvudu mundaley koidu muDig-huvvu muDisidante

caraNam 2

nagegEDu mADi nAlvara munde mOga geDisi maguLe bArendu mannisi lAlisi
migilAda vastragaLa bhUSaNangaLa nIyE togala mUg-haridu cinnada mUganittante

caraNam 3

artta hOdare prANa prANa hOdare mAna vyarttavAgada hAge kAyabEku
karta purandara viTTalarAyana cittadali nene nenedu sukhiyAga bEku
***

ಮಾನಭಂಗವ ಮಾರಿ ಮೇಲುಪಚಾರವ 
ಏನ ಮಾಡಿದರಿಲ್ಲಿ ಇರಬಾರದಯ್ಯ ಪ.

ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1

ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2

ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
********