..
kruti by tandeshreenarahari
ಜೋ ಜೋ ಪ
ಬಾರೆಯ್ಯ ಗೋವಿಂದಾ ಅರವಿಂದ ನಯನಾತೋರೆಯ್ಯ ಇಂದಿರಾ ಚುಂಬಿತಾ ಚರಣಾಸಾರಯ್ಯ ತೊಟ್ಟಿಲ ಶ್ರೀ ದೇವಿ ಮದನಾಸಾಕಯ್ಯ ಬೀದೀಲಿ ಹುಡುಗರ ಕದನಾ 1
ಬಾಯೆನ್ನ ಕಂದಾ ಬಾ ಎನ್ನ ನಂದಾಬಾ ಇನ್ನು ಮಲಗುವೆ ಮುದ್ದು ಕಂದಾಬಾಯಲ್ಲಿ ತೋರಿದ ಜಗದ ಆನಂದಾಬಾ ಇನ್ನು ತೂಗುವೆ ಮುಚಕುಂದ ವರದಾ 2
ರತ್ನದ ತೊಟ್ಟಿಲ ಚಿನ್ನದ ಸರಪಣಿಎತ್ತ ನೋಡಿದರತ್ತ ಆಡುವ ಬೊಂಬೆಇತ್ತ ಬಾರಯ್ಯ ಮಾರ ಸುಕುಮಾರಒತ್ತಿತೂಗುವನಯ್ಯಾ ತಂದೆ ಶ್ರೀ ನರಹರಿ 3
***