Showing posts with label ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ neleyadikeshava BANDADONDU CHENDA SAALADE GOPIYA KANDA. Show all posts
Showing posts with label ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ neleyadikeshava BANDADONDU CHENDA SAALADE GOPIYA KANDA. Show all posts

Wednesday, 3 November 2021

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ankita neleyadikeshava BANDADONDU CHENDA SAALADE GOPIYA KANDA

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ಪ

ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ 1

ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ 2

ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ3

***