ಮನ್ನಿಸ್ಯಾದವಾ ಮಮತೆಯಿಂದಾಲೆನ್ನ ಮಾಧವಾ ಪ.
ನೀರಜಾಕ್ಷನೆ ಪಾಲಿಸು ಜಗದ್ಭರಿತವಾಸನೆ
ಘೋರ ಸಂಸಾರಕ್ಕೆ ಸಿಲ್ಕಿ ಘಾಸಿಯಾಗನೆಂದಾಮೋಸವಾಗಿ
ಮೂರುದಿನದ ಬಾಳ ನೆಚ್ಚಿ ಘಾಸಿಯಾದೆನು
ನಾರಾಯಣ ನಿಮ್ಮ ನೆನೆವೆನನುದಿನಾ 1
ಬಿಸಜನೈಯ್ಯನೆ ಶ್ರೀತುಲಸಿಮಾಲಾ ಭೂಷÀನೆ
ಹಸಿವು ತೃಷೆಯು ನಿದ್ರೆಯಿಂದಾ ಹೊತ್ತುಗಾಣೆನೈಯ್ಯಾ
ದೆಸೆಗೆದೆಸೆಗೆ ಇಂದ್ರಿಯಗಳು ಎಳೆದು ಕಾಡುತಾರೈಯ್ಯಾ
ವಸುಧಿಗೊಡೆಯ ನಿಮ್ಮ ನೆನೆಯದೆ ಮುಗ್ಧಳಾದೆನು 2
ದುರಿತನಾಶನೆ ಪಾಲಿಸು ಜಗದ್ಭರಿತವಾಸನೆ
ನಿರುತ ವ್ಯಾಧಿಯಿಂದ ಮಂದಳಾದೆನು ಸರ್ವೇಶನೆ
ಮರುತನಂತೆ ಮನಸ್ಥಿರವ ಮಾಡಿಸೋ ಲಕ್ಷ್ಮೀಶ
ಕರ್ತೃ ಹೆಳವನಕಟ್ಟೆ ವೆಂಕಟೇಶನೆ 3
*****