Showing posts with label ಹರಿದಿನ ಇಂಥ ಹರಿದಿನ prasannavenkata. Show all posts
Showing posts with label ಹರಿದಿನ ಇಂಥ ಹರಿದಿನ prasannavenkata. Show all posts

Tuesday 19 November 2019

ಹರಿದಿನ ಇಂಥ ಹರಿದಿನ ankita prasannavenkata

ಹರಿದಿನ ಇಂಥ ಹರಿದಿನ ಪ.
ಹರಿದಿನದ ಮಹಿಮೆ ಹೊಗಳಲಗಾಧ||

ಪರಮ ಭಾಗವತರಾಚರಣೆಗಾಹ್ಲಾದÀ
ದುರಿತ ದುಷ್ಕøತ ಪರ್ವತಕೆ ವಜ್ರವಾದ
ಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ||a.pa||

ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ
ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ
ಮಖಕೋಟಿಗಧಿಕ ಫಲಸ್ಥಿರ ಸ್ತಂಭ
ಮುಕ್ತಿ ಸೋಪಾನ ನಿಧಾನತ್ವವೆಂಬ ||1||

ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ
ಯುಕ್ತ ಸಪ್ತ ಧಾತುಗಳಿಹ ಶರೀರ
ನಖ ಕೇಶ ಕಫ ಸ್ವೇದ ಮಲ ಮೂತ್ರಾಗರ ಈ
ನಿಖಿಳ ಪಾವನ ಮಾಡುವ ನಿರಾಹಾರ ||2||

ವರ ವಿಪ್ರ ಕ್ಷತ್ರಿಯ ವೈಶ್ಯ ಶೂದ್ರ ಜನರು
ತರಳ ಯೌವನ ವೃದ್ಧ ನಾರಿಯರು
ಕಿರಾತ ಪುಲತ್ಸ್ಯಾಂದ್ರ ಹೂಣ ಜಾತಿಯವರು
ಹರಿವ್ರತ ಮಾತ್ರದಿ ಮುಕ್ತಿಯೈದುವರು ||3||

ದ್ವಿಜ ಗೋವಧ ನೃಪರನು ಕೊಂದ ಪಾಪ
ನಿಜಗುರು ಸತಿಯರ ಸಂಗದ ಪಾಪ
ಅಜಲಪಾನದ ದಿನದುಂಡ ಮಹಾಪಾಪ
ನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ ||4||

ಯಾಮಿನಿಯಲಿ ಅನಿಮಿಷದ ಜಾಗರವು
ಶ್ರೀ ಮದ್ಭಾಗವತ ಶ್ರವಣ ಗೀತಾಪಠಣ
ಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯು
ಧಾಮತ್ರಯದ ಸುಖಕಿದೇ ಕಾರಣವು ||5||

ಅರ್ಧಕೋಟಿ ತೀರ್ಥಸ್ನಾನವೆಲ್ಲ ಅ
ಜಸ್ರಪ್ರಯಾಗ ಕಾಶಿವಾಸವೆಲ್ಲ ಸ
ಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲ
ಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ||6||

ಪಂಚಮಹಾ ಪಾಪ ಪ್ರಪಾಪವವಗೆ
ವಂಚಕ ಪಿಶುನ ಜನರ ಪಾಪವವಗೆ
ಮಿಂಚುವ ಕ್ಷೇತ್ರವಳಿ ಪಾಪವವಗೆ
ಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ||7||

ಸರ್ಪಶಯನಗೆ ನೀರಾಜನವೆತ್ತಿ ನೋಡಿ
ಉಪವಾಸದಿ ಭಗವಜ್ಜನ ನೃತ್ಯವಾಡಿ
ಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿ
ತಪ್ಪೆ ನಾಯಿ ನರಕ ಫಲ ಕೈಗೂಡಿ ||8||

ಶ್ರುತಿ ಪಂಚರಾತ್ರಾಗಮವು ಸಾರುತಿವೆ
ಯತಿ ಮಧ್ವರಾಯರುಕುತಿ ಪೇಳುತಿವೆ
ಕ್ರತು ಪ್ರಸನ್ವೆಂಕಟ ಕೃಷ್ಣ ಮತವೆ
ಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ||9||
***

Haridina intha haridina –
Haridinada mahime hogalalagadha || pa ||

Parama bagavatara caranegahlada
Duritadushkutake vajranada
Marutasadvratakella siroratnavada
Haridina intha haridina || a ||

Bakutige modalu virakuti bijavemba
Sakala tapadolella melenisikomba
Makakotigadhika Pala sthirastamba
Mukuti sopana nidanatvademba || 1 ||

Tvak Sarma asthi majja mamsarudhira
Yukutasaputadhatugaliha sarira
Nakakesakapas vedamalamutragara
I nikila pavana maduva nirahara || 2 ||

Varavi prakshatriyavai syasudra janaru
Taralayavvana vruddhanararu nariyaru
Kiratapulakasandhra hunajatiyavaru
Harivratamatradi mukutiyaiduvaru || 3 ||

Dvijagovuvuvadha nruparanu konda papa
Nijagurusatiyara sangama papa
Ajalapanada dinadunda mahapapa
Nijanasa moksha praptiyu satyalapa || 4 ||

Yaminiyali animishada jagaravu
Srimadbagavata sravana gitapathana
Premavaridhili mulugu samkirtaneyu
Dhamatrayada sukakide karanavu || 5 ||

Ardhakoti tirthasnanavella A
Asra prayaga kasivasavella
Sahasra koti bupradakshineyella
Susraddhe saha jagarake sariyalla || 6 ||

Pancha mahapapa prapapavavage
Vanchakapisunajanara papavavage
Minchuva kshetravali prapapavage
Panchakavrata pettavrata ullangipage || 7 ||

Sarpasayanage nirajanavetti nodi
Upavasadi bagavadbajana nrutyavadi
Cappalikkuta dandigi muttipadi
Tappena ilanarka Pala kaigudi || 8 ||

Srutipancaratragamavu sarutide
Yati madhvarayara kruti pelutive
Kratusevya prasanvenkata krushna matave
Kshitipatisuraratisayada sadvratave || 9 ||

by ಪ್ರಸನ್ನವೆಂಕಟದಾಸರು
ಹರಿದಿನ ಇಂಥ ಹರಿದಿನ ಪ.

ಹರಿದಿನದ ಮಹಿಮೆ ಹೊಗಳಲಗಾಧಪರಮಭಾಗವತರಾಚರಣೆಗಾಹ್ಲಾದÀದುರಿತದುಷ್ಕøತ ಪರ್ವತಕೆ ವಜ್ರವಾದಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ ಅ.ಪ.

ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬಸಕಲ ತಪದೊಳೆಲ್ಲ ಮೇಲೆನಿಸಿಕೊಂಬಮಖಕೋಟಿಗಧಿಕ ಫಲಸ್ಥಿರ ಸ್ತಂಭಮುಕ್ತಿ ಸೋಪಾನ ನಿಧಾನತ್ವವೆಂಬ 1

ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸರುಧಿರಯುಕ್ತ ಸಪ್ತ ಧಾತುಗಳಿಹ ಶರೀರನಖಕೇಶ ಕಫ ಸ್ವೇದ ಮಲ ಮೂತ್ರಾಗರ ಈನಿಖಿಳಪಾವನ ಮಾಡುವ ನಿರಾಹಾರ2

ವರವಿಪ್ರಕ್ಷತ್ರಿಯ ವೈಶ್ಯ ಶೂದ್ರ ಜನರುತರಳಯೌವನ ವೃದ್ಧ ನಾರಿಯರುಕಿರಾತಪುಲತ್ಸ್ಯಾಂದ್ರ ಹೂಣ ಜಾತಿಯವರುಹರಿವ್ರತ ಮಾತ್ರದಿ ಮುಕ್ತಿಯೈದುವರು 3

ದ್ವಿಜಗೋವಧ ನೃಪರನು ಕೊಂದ ಪಾಪನಿಜಗುರು ಸತಿಯರ ಸಂಗದ ಪಾಪಅಜಲಪಾನದ ದಿನದುಂಡ ಮಹಾಪಾಪನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ 4

ಯಾಮಿನಿಯಲಿ ಅನಿಮಿಷದ ಜಾಗರವುಶ್ರೀ ಮದ್ಭಾಗವತ ಶ್ರವಣ ಗೀತಾಪಠಣಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯುಧಾಮತ್ರಯದ ಸುಖಕಿದೇ ಕಾರಣವು 5

ಅರ್ಧಕೋಟಿ ತೀರ್ಥಸ್ನಾನವೆಲ್ಲ ಅಜಸ್ರಪ್ರಯಾಗ ಕಾಶಿವಾಸವೆಲ್ಲ ಸಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ 6

ಪಂಚಮಹಾ ಪಾಪ ಪ್ರಪಾಪವವಗೆವಂಚಕ ಪಿಶುನ ಜನರ ಪಾಪವವಗೆಮಿಂಚುವ ಕ್ಷೇತ್ರವಳಿ ಪಾಪವವಗೆಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ 7

ಸರ್ಪಶಯನಗೆ ನೀರಾಜನವೆತ್ತಿ ನೋಡಿಉಪವಾಸದಿ ಭಗವಜ್ಜನ ನೃತ್ಯವಾಡಿಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿತಪ್ಪೆ ನಾಯಿ ನರಕ ಫಲ ಕೈಗೂಡಿ 8

ಶ್ರುತಿಪಂಚರಾತ್ರಾಗಮವು ಸಾರುತಿವೆಯತಿ ಮಧ್ವರಾಯರುಕುತಿ ಪೇಳುತಿವೆಕ್ರತುಪ್ರಸನ್ವೆಂಕಟ ಕೃಷ್ಣ ಮತವೆಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ 9
****